ಪುತ್ತೂರು: ಲೊಕೋಪಯೋಗಿ ಇಲಾಖೆ ಪುತ್ತೂರು ಇದರ ವತಿಯಿಂದ ಪುತ್ತೂರು ಉಪ್ಪಿನಂಗಡಿ ರಸ್ತೆ ಮಧ್ಯೆ ಇರುವ ಡಿವೈಡರ್‌ಗಳಲ್ಲಿ ಕ್ರಾಟನ್ ಗಿಡಗಳನ್ನು ನೆಡುವ ಕಾರ್ಯಕ್ಕೆ ಶಾಸಕರಾದ ಅಶೋಕ್ ರೈ ಚಾಲನೆ ನೀಡಿದರು.
ಪುತ್ತೂರಿನಿಂದ ಉಪ್ಪಿನಂಘಡಿ ತನಕ ರಸ್ತೆ ಮಧ್ಯೆ ಡಿವೈಡರ್ ಇರುವಲ್ಲಿ ಉಜ್ಜೈನಿ ಕ್ರಾಟನ್ ಗಿಡಗಳನ್ನು ನೆಡಲಾಗುವುದು. ರಸ್ತೆ ಮಧ್ಯೆ ಈ ಗಿಡಗಳು ಸೊಂಪಾಗಿ ಬೆಳೆದಲ್ಲಿ ರಸ್ತೆ ಸೌಂದರ್ಯ ವಋದ್ದಿಯಗುತ್ತದೆ ಮತ್ತು ಸ್ವಚ್ಚತೆಗೆ ಕಾರಣವಾಗುತ್ತದೆ ಎಂದು ಶಾಸಕರು ಹೇಳಿದರು. ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡಗಳನ್ನು ನೆಡುವ ಮೂಲಕ ಸುದ್ದಿಯಾಗಿದ್ದ ಶಾಸಕರು ಇದೀಗ ರಸ್ತೆ ಡಿವೈಡರ್‌ಗಳಲ್ಲಿ ಕ್ರಾಟನ್ ಗಿಡಗಳನ್ನು ನೆಡಿವು ಮೂಲಕ ಪುತ್ತೂರು ನಗರ ಪ್ರವೇಶಿಸುವ ರಸ್ತೆಗೆ ಮೆರುಗನ್ನು ನೀಡುವ ಕೆಲಸವನ್ನು ಮಡಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಪಯೋಗಿ ಇಲಾಖೆ ಅಭಿಯಂತರ ರಾಜಾರಾಂ , ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಉಪಸ್ಥಿತರಿದ್ದರು.