ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಬೆಂಗಳೂರು ಕಂಬಳ: ಶಾಸಕರ ನೇತೃತ್ವದಲ್ಲಿ ಸಭೆ

Published

on

ಬೆಂಗಳೂರು ಕಂಬಳ: ಶಾಸಕರ ನೇತೃತ್ವದಲ್ಲಿ ಸಭೆ

ಬೆಂಗಳೂರು ಕಂಬಳ: ಶಾಸಕರ ನೇತೃತ್ವದಲ್ಲಿ ಸಭೆ

 

 

ಪುತ್ತೂರು: ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರಮುಖರ ಜೊತೆ ಶಾಸಕರಾದ ಅಶೋಕ್ ರೈಯವರು ಬೆಂಗಳೂರಿನ ಸ್ವಾತಿ ಹೊಟೇಲ್ ಸಭಾಂಗಣದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಜಧಾನಿಯಲ್ಲಿ ಕಂಬಳ ಏರ್ಪಡಿಸಲಾಗಿದೆ. ಕಂಬಳ ವೀಕ್ಷಣೆಗೆ ರಾಜ್ಯದ ನಾನಾ ಕಡೆಗಳಿಂದ ಕಂಬಳಾಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು ಕಾರ್ಯಕ್ರಮದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಬೆಂಗಳೂರಿನಲ್ಲಿರುವ ತುಳುನಾಡಿನ ವಿವಿಧ ಸಂಘಟನೆಗಳ ಒಗ್ಗೂಡುವಿಕೆಯಿಂದ , ಅವರ ಸಹಕಾರದಿಂದ ಈ ಕಂಬಳ ನಡೆಯುತ್ತಿದ್ದು ಅಭೂತಪೂರ್ವ ಕಾರ್ಯಕ್ರಮವನ್ನು ಯಶಶ್ವಿಗೊಳಿಸುವಲ್ಲಿ ಶಾಸಕರು ಎಲ್ಲರ ಸಹಕಾರ ಕೋರಿದರು.

 

 

ಸಭೆಯಲ್ಲಿ ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷರಾದ ಸುಂದರ್‌ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಬೆಂಗಳೂರು ಲಿಕ್ಕರ್ ಎಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯರೈ ದಂಬೆಕಾನ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ರಾಜ್‌ಕುಮಾರ್ ರೈ, ರಾಕೇಶ್ ರೈ ಕುದ್ಕಾಡಿ, ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ಯಾಡಿ, ರಾಜೇಶ್ ಶೆಟ್ಟಿ ಕೋಡಿಂಬಾಡಿ, ಕರುಣಾಕರ ಸಾಮಾನಿ, ಶರತ್, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ , ದೀಕ್ಷಿತ್ ರೈ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement