ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಕೇರಳದ ಓಣಂ ಬಂಪರ್‌ ಡ್ರಾ ದಲ್ಲಿ ಉಪ್ಪಿನಂಗಡಿಯ ಮೇಸ್ತ್ರಿಗೆ ಒಲಿದ 50 ಲಕ್ಷ ರೂ. ಬಹುಮಾನ

Published

on

ಪುತ್ತೂರು: ಉಪ್ಪಿನಂಗಡಿಯ ಮೇಸ್ತ್ರಿಗೆ ಅದೃಷ್ಟವೊಂದು ಒಲಿದು ಬಂದಿದೆ. ಉಪ್ಪಿನಂಗಡಿಯ ಇಳಂತಿಲ ನಿವಾಸಿ ಚಂದ್ರಯ್ಯ ಕೇರಳ ರಾಜ್ಯ ಲಾಟರಿಯಲ್ಲಿ 50 ಲಕ್ಷ ರೂ.ಬಹುಮಾನ ಗೆದ್ದಿದ್ದಾರೆ.

ಮೇಸ್ತ್ರಿ ಆಗಿರುವ ಚಂದ್ರಯ್ಯ ಕಾನತ್ತೂರು ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾಸರಗೋಡಿನಲ್ಲಿರುವ ಬೊಲ್ಲು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ 500 ರೂ. ಬೆಲೆಯ ಸೆ.20ರಂದು ಡ್ರಾ ಇದ್ದ ಓಣಂ ಬಂಪರ್ ಲಾಟರಿ ಟಿಕೇಟ್ ಖರೀದಿಸಿದ್ದರು. ಇದೀಗ ಇವರು ಖರೀದಿಸಿದ ಟಿಕೆಟ್‌ಗೆ ಬಂಪರ್ ಬಹುಮಾನವಾಗಿ 50ಲಕ್ಷ ರೂ. ಬಂದಿದೆ.

ಈ ಹಿಂದೆ ಇದೇ ಬೊಲ್ದು ಲಕ್ಕಿ ಲಾಟರಿ ಏಜೆನ್ಸಿಯ ಮೂಲಕ ಟಿಕೆಟ್ ಖರೀದಿಸಿದ ಉಪ್ಪಿನಂಗಡಿ ಕೆಂಪಿಮಜಲು ಎಂಬಲ್ಲಿನ
ಆನಂದ ಟೈಲರ್ (72) ಎಂಬವರಿಗೆ 80 ಲಕ್ಷ ರೂ.ಬಹುಮಾನ ಬಂದಿತ್ತು. ಇದೀಗ ಎರಡನೇ ಬಾರಿಗೆ ಉಪ್ಪಿನಂಗಡಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದು ಅಚ್ಚರಿ ಮೂಡಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement