ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಿವಾಹಿತೆಯನ್ನು ಬ್ಲಾಕ್ ಮೇಲ್ ಮಾಡಿದ ಪ್ರಶಾಂತ್ ಭಟ್ ಮಾಣಿಲ ಅರೆಸ್ಟ್

Published

on

ಕಾರವಾರ: ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ ಕ್ ಮೇಲ್ ಮಾಡಿರುವ ಪ್ರಕರಣಕ್ಕೆ ಬ್ಲ್ಯಾಕ್ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಕಾರವಾರ ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಕರಣದ ವಿವರ :

ದೂರುದಾರ ವಿವಾಹಿತ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಉಳ್ಳವಳಾಗಿದ್ದು, ಮೊಬೈಲ್ ನಲ್ಲಿರುವ ಕ್ಲಬ್ ಹೌಸ್ ಅಪ್ಲಿಕೇಷನ್ ನಲ್ಲಿ ಆಗಾಗ ಹಾಡು ಹಾಡುತ್ತಿದ್ದಳು. ಕಳೆದ 2020 ರಲ್ಲಿ ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈಕೆಗೆ ಆರೋಪಿ ಪ್ರಶಾಂತ ಭಟ್ ಮಾಣಿಲ, ಪ್ರಾಯ: 35 ವರ್ಷ, ವೃತ್ತಿ: ಮನೆಕೆಲಸ, ಸಾ, ಅರ್ಲಪದವು, ತಾ: ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ ಈತನ ಪರಿಚಯ ಆಗಿದ್ದು, ಇದರ ಆ್ಯಪ್‌ನಲ್ಲಿ ಇಬ್ಬರೂ ಚಾಟ್ ಮಾಡುತ್ತಾ ಇದ್ದವರು, ನಂತರ ಫೇಸ್ ಬುಕ್ ನಲ್ಲಿ ಇಬ್ಬರೂ ಫ್ರೆಂಡ್ ಆಗಿದ್ದರು.ಇದಾದ ಬಳಿಕ ಕ್ರಮೇಣ ಇಬ್ಬರೂ ಇಷ್ಟಪಡುತ್ತಿದ್ದು, ನಂತರದ ದಿನಗಳಲ್ಲಿ ಆರೋಪಿ ದೂರುದಾರಳಿಗೆ ನಿನಗೆ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ಆಸೆ ಹುಟ್ಟಿಸಿದ್ದು, ನಂತರ ದೂರುದಾರ ಮೊಬೈಲ್ ನಂಬರನ್ನು ಕೂಡ ಆರೋಪಿಗೆ ನೀ ಇಬ್ಬರೂ ಪರಸ್ಪರ 2 ವರ್ಷಗಳ ತನಕ ಫೋನ್ ನಲ್ಲಿ ಮೆಸೇಜ್ ಹಾಗೂ ಕಾಲ್ ದಲ್ಲಿ ಸಂಪರ್ಕದಲ್ಲಿ ಇದ್ದರು ಎನ್ನಲಾಗಿದೆ.
ಆರೋಪಿಯು ದೂರುದಾರಳಿಗೆ ನಿನ್ನನ್ನು ಭೇಟಿಯಾಗಬೇಕು ಎಂದು ತನಗೆ ಅನಿಸುತ್ತಿದೆ ಎಂದು ಮನವೊಲಿಸಿ ಕಳೆದ 2023 ಜನವರಿ ಕೊನೆಯ ವಾರದಲ್ಲಿ ಒಂದು ದಿನದಂದು ಶಿರಸಿ ಮಾರಿಗುಡಿ ದೇವಸ್ಥಾನದಲ್ಲಿ ಭೇಟಿಯಾಗಿ, ಅಲ್ಲಿಂದ ಶಿರಸಿಯ ಖಾಸಗಿ ಲಾಡ್ಜ್ ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ರೂಮ್ ಮಾಡಿ ಆ ದೂರುದಾರಳ ಮೇಲೆ ಬಲಾತ್ಕಾರದಿಂದಲೈಂಗಿಕ ಸಂಭೋಗ ಮಾಡಿದ್ದ ಎನ್ನಲಾಗಿದೆ.

ಇದಾದ ನಂತರ 2023 ರ ಫೆಬ್ರುವರಿ ಮೊದಲನೇ ವಾರದಲ್ಲಿ ಮತ್ತೆ ಅದೇ ಶಿರಸಿಯ ಖಾಸಗಿ ಲಾಡ್ಜ್‌ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿ, ಅಲ್ಲಿ ದೂರುದಾರಳ ಮೇಲೆ ಬಲಾತ್ಕಾರದಿಂದ ಲೈಂಗಿಕ ಸಂಭೋಗ ಮಾಡಿದ್ದಲ್ಲದೇ ಈ ಎರಡೂ ಘಟನೆಯ ವೇಳೆ ಆರೋಪಿ ದೂರುದಾರಳೊಂದಿಗೆ ತನ್ನ ಫೋಟೋಗಳನ್ನು ತೆಗೆದುಕೊಂಡಿದ್ದವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಬಳಿಕ ಆರೋಪಿಯು ಪ್ರತಿ ದಿನ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ನನ್ನ ನಿನ್ನ ಇಬ್ಬರ ಫೋಟೋ ಹಾಗೂ ನಿತ ಖಾಸಗಿ ವೀಡಿಯೋ ಹಾಗೂ ಫೋಟೋಗಳು 9 ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಬ್ಲಾಕ್ ಮೇಲ್ ಮಾಡಿದ್ದು, ನಂತರ ದೂರುದಾರಳಿಗೆ ಆರೋಪಿಯು ವೀಡಿಯೋ ಕಾಲ್ ಮಾಡಿ, ಬೆತ್ತಲೆ ದೇಹವನ್ನು ತೋರಿಸುವಂತೆ ಹೆದರಿಸಿ, ಅದರ ಸ್ಟೀನ್ ಶಾಟ್ ತೆಗೆದುಕೊಂಡಿದ್ದ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಬಳಿಕ ಆರೋಪಿಯು ಪ್ರತಿ ದಿನ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ನನ್ನ ನಿನ್ನ ಇಬ್ಬರ ಫೋಟೋ ಹಾಗೂ ನಿನ್ನ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ನಿನ್ನ ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದು, ನಂತರ ದೂರುದಾರಳಿಗೆ ಆರೋಪಿಯು ವೀಡಿಯೋ ಕಾಲ್ ಮಾಡಿ, ಬೆತ್ತಲೆ ದೇಹವನ್ನು ತೋರಿಸುವಂತೆ ಹೆದರಿಸಿ, ಅದರ ಸ್ಟೀನ್ ಶಾಟ್ ತೆಗೆದುಕೊಂಡಿದ್ದ ಇದಾದ ಬಳಿಕ ನನಗೆ ಹಣದ ಸಮಸ್ಯೆ ಇದೆ, ನೀನು ನನಗೆ ಹಣ ನೀಡು, ಇಲ್ಲವಾದಲ್ಲಿ ನಾನು ನಿನ್ನ ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡುವೆ ಎಂದು ಪ್ರತಿ ದಿನ ಮಾನಸಿಕ ಕಿರುಕುಳ ನೀಡಿದ್ದ. ಆದ್ದರಿಂದ ದೂರುದಾರ ಮಹಿಳೆ ಹೆದರಿಕೊಂಡು ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸಿ, ರೂ. 25,000/- ಗಳನ್ನು ಆರೋಪಿಯ ಮೊಬೈಲ್ ನಂಬರಿಗೆ ಗೂಗಲ್ ಪೇ ಮಾಡಿಸಿರುತ್ತಾಳೆ. ಆದರೂ ಆರೋಪಿ ಪ್ರಶಾಂತ್ ಭಟ್ ಮಾಣಿಲ ತನಗೆ ಇನ್ನೂ ಹಣ ಬೇಕು ಎಂದು ದೂರುದಾರಳಿಗೆ ಮೇಲ್ ಮಾಡುತ್ತಾ ಆಕೆಯ ಬ್ಲ್ಯಾಕ್ ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ದೂರುದಾರಳ ತಾಯಿಯ ಮೊಬೈಲಿಗೆ ವಾಟ್ಸಪ್ ಮೂಲಕ ಕಳಿಸಿದ್ದ ಎನ್ನಲಾಗಿದೆ.ಅಷ್ಟೇ ಅಲ್ಲದೇ ನಂತರ ಫೇಸ್ ಬು ದೂರುದಾರ ಮಹಿಳೆಯ ಸ್ನೇಹಿತರಿಗೂ ಕಳುಹಿಸಿದ್ದಾನೆ. ಮೊಬೈಲಿಗೆ ವಾಟ್ಸಪ್ ಮೂಲಕ ಕಳಿಸಿದ್ದ ಎನ್ನಲಾಗಿದೆ.ಅಷ್ಟೇ ಅಲ್ಲದೇ ನಂತರ ಫೇಸ್ ಬುಕ್ ನಲ್ಲಿ ದೂರುದಾರ ಮಹಿಳೆಯ ಸ್ನೇಹಿತರಿಗೂ ಕಳುಹಿಸಿದ್ದಾನೆ. ನಂತರ ದೂರುದಾರಳ ಗಂಡನಿಗೆ ನಿನ್ನ ಹೆಂಡತಿಯ ಮರ್ಯಾದೆ ಉಳಿಯಬೇಕೆಂದರೆ, 7 ಲಕ್ಷ ರೂಪಾಯಿ ನೀಡಿ, ಮರ್ಯಾದೆ ಉಳಿಸಿಕೋ ಎಂದು ಆತನಿಗೆ ಬ್ಯಾಕ್‌ಮೇಲ್ ಮಾಡಿದ್ದು ಹಾಗೂ ದೂರುದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ದುಡ್ಡು ನೀಡದಿದ್ದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆನೊಂದ ದೂರುದಾರ ಮಹಿಳೆ ತನ್ನ ಮನೆಯವರಲ್ಲಿ ಈ ಬಗ್ಗೆ ಚರ್ಚಿಸಿ ಪೋಲಿಸ್ ದೂರು ನೀಡಲು ವಿಳಂಬವಾಗಿದ್ದು, ಮನೆ ಜನರ ಮರ್ಯಾದೆಗೆ ಅಂಜಿ ಇಷ್ಟು ದಿನ ದೂರು ನೀಡಿದೇ ಇದ್ದಿದ್ದನ್ನೇ ಚಾನ್ಸ್ ಎಂದು ಭಾವಿಸಿ ಬ್ಲ್ಯಾಕ್ ಮೇಲ್ ಗೆ ಇಳಿದಿದ್ದ ಆರೋಪಿ ಪ್ರಶಾಂತ ಭಟ್ ಮಾಣಿಲನ ವಿರುದ್ಧ ಸದ್ಯ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376,376(N), 504,506,503,384 IT Act 20088 67(A) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ಜೈಲಿಗೆ ರವಾನಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement