Published
1 year agoon
By
Akkare Newsಪುತ್ತೂರು : ಇತ್ತೀಚೆಗೆ ನಿಧನರಾದ ಒಳಮೊಗ್ರು ಗ್ರಾಮದ ನಾಣಿಲ್ತಡ್ಕ ನಿವಾಸಿ ಐತಪ್ಪ ಪೂಜಾರಿಯವರ ಮನೆಗೆ ಶಾಸಕರಾದ ಅಶೋಕ್ ರೈ ಯವರು ಭೇಟಿ ನೀಡಿದರು.
ಕೂಲಿ ಕಾರ್ಮಿಕರಾಗಿದ್ದ ಐತಪ್ಪ ಪೂಜಾರಿಯವರು ಹೃದಯ ಸ್ತಂಬನದಿಂದ ನಿಧನರಾಗಿದ್ದರು. ಮೃತರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಕಾಂಗ್ರೆಸ್ ಮುಖಂಡರಾದ ಇಸುಬು ಮೈದಾನಿಮೂಲೆ, ಕೆಪಿಎಸ್ ಸ್ಕೂಲ್ ಕುಂಬ್ರದ ಇಲ್ಲಿನ ಕಾರ್ಯಾಧ್ಯಕ್ಷರಾದ ರಕ್ಷಿತ್ ರೈ ಮುಗೇರು,ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ ಮೊದಲಾದವರು ಉಪಸ್ಥಿತರಿದ್ದರು.