ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಒಳಮೊಗ್ರು ಶಿಥಿಲಗೊಂಡ ಕಿರು ಸೇತುವೆ ವೀಕ್ಷಿಸಿದ ಶಾಸಕ ಅಶೋಕ್ ರೈ

Published

on

  • ಹೊಸ ಸೇತುವೆ ನಿರ್ಮಾಣದ ಭರವಸೆ_ ಈಡೇರಿದ ಬಹುಕಾಲದ ಕನಸು

ಪುತ್ತೂರು: ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುಳಿಯಡ್ಕ ಎಂಬಲ್ಲಿರುವ ಕಿರು ಸೇತುವೆಯು ಶಿಥಿಲಗೊಂಡಿದ್ದು ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯನ್ನು ಪರಿಶೀಲನೆ ಮಾಡಿದರು.

ಗ್ರಾಮದ ಪರ್ಪುಂಜದಿಂದ ಕುಟನೋಪ್ಪಿನಡ್ಕ ಮೂಲಕ ದರ್ಬೆತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಈ ಸೇತುವೆಯು ಸುಮಾರು ೩೦ ವರ್ಷಗಳ ಹಿಂದೆ ಜನಾರ್ಧನ ಪೂಜಾರಿಯವರು ಲೋಕಸಭಾ ಸದಸ್ಯರಾಗಿರುವ ಕಾಲದಲ್ಲಿ ನಿರ್ಮಾಣವಾಗಿದೆ. ಸೇತುವೆ ಅಗಲ ಕಿರಿದಾಗಿದ್ದು ಘನ ವಾಹನಗಳು ಇದರಲ್ಲಿ ಸಂಚರಿಸಲು ಸಾಧ್ಯವಿಲ್ಲ. ಸೇತವೆಯು ಶಿಥಿಲಗೊಂಡಿದ್ದು ಲಘು ವಾಹನ ಸಂಚಾರಕ್ಕೂ ಅಯೋಗ್ಯವಾಗಿದೆ. ಸೇತುವೆಯನ್ನು ದುರಸ್ಥಿ ಮಡಿ ಎಂದು ಕಳೆದ ೧೫ ವರ್ಷಗಳಿಂದ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಆದರೆ ಯಾವೊಬ್ಬ ಜನಪ್ರತಿನಿಧಿಯಾಗಲಿ ಇತ್ತ ಕಡೆ ಸುಳಿಯಲಿಲ್ಲ.

ಅ. ೩ ರಂದು ಸ್ಥಳಕ್ಕೆ ಭೇಟಿ ನೀಡಿದ ಶಸಕರು ಶಿಥಿಲಗೊಂಡ ಸೇತುವೆಯನ್ನು ವೀಕ್ಷಣೆ ಮಾಡಿದರು. ಶೀಘ್ರದಲ್ಲೇ ಹೊಸ ಸೇತುವೆಯ ನಿರ್ಮಾಣ ಮತ್ತು ಸೇತುವೆಯ ಸಂಪರ್ಕದ ಎರಡೂ ಬದಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಇದರಿಂದಾಗಿ ಈ ಭಾಗದ ಜನತೆಯ ಸುಮಾರು ೧೫ ವರ್ಷಗಳ ಕನಸು ನನಸಾದಂತಾಗಿದೆ. ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷರಾದ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ್, ಶಾರದಾ, ಕುಂಬ್ರ ಕೆಪಿಎಸ್ ಸ್ಕೂಲ್ ಕಾರ್ಯಾಧ್ಯಕ್ಷರಾದ ರಕ್ಷಿತ್ ರೈ ಮುಗೇರು,ಕೆ ಪಿ ಮಹಮ್ಮದ್, ಸೇರಿದಂತೆ ಗ್ರಾಮಸ್ಥರು ಉಪಸ್ತಿತರಿದ್ದರು.

 

ಕೋಟ್

 

ಸೇತುವೆ ಮಾಡಿ ಎಂದು ಮನವಿ ಮಾಡಿ ಸಾಕಾಗಿ ಹೋಗಿದೆ. ಈಗ ಇರುವ ಸೇತುವೆ ಅಗಲ ಕಿರಿದಾಗಿರುವ ಕಾರಣ ಉಪಯೋಗ ಶೂನ್ಯವಾಗಿದೆ. ಪ್ರಧಾನ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆಗೆ ಮುಕ್ತಿ ದೊರೆಯುವ ವಿಶ್ವಾಸ ನಮಗಿದ್ದು ಹೊಸ ಸೇತುವೆಗೆ ಅನುದಾನ ಒದಗಿಸುವುದಾಗಿ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಶಾಸಕರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಷ್ಟು ವರ್ಷದಲ್ಲಿ ಈ ಸೇತವೆಗೆ ಮುಕ್ತಿ ದೊರೆತಿರಲಿಲ್ಲ

 

ಇಸುಬು, ಮಾಜಿ ಉಪಾಧ್ಯಕ್ಷರು, ಒಳಮೊಗ್ರು ಗ್ರಾಪಂ

 

 

ಕೋಟ್

ನುಡಿದಂತೆ ನಡೆಯುವ ಪುತ್ತೂರು ಶಾಸಕರು ಮುಳಿಯಡ್ಕ ಸೇತುವೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಖಂಡಿತವಾಗಿಯೂ ಇಲ್ಲಿ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆಯಲಿದೆ. ಸೇತುವೆಯ ನಿರ್ಮಾಣದ ಜೊತೆಗೆ ರಸ್ತೆ ಕಾಮಗಾರಿ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ

 

ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರು

Continue Reading
Click to comment

Leave a Reply

Your email address will not be published. Required fields are marked *

Advertisement