ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಭರದ ಪೂರ್ವಸಿದ್ಧತೆ

Published

on

 

 

ಪುತ್ತೂರು: ಕೋಡಿಂಬಾಡಿಯ ಗ್ರಾಮ ದೇವಸ್ಥಾನವಾಗಿರುವ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಕಾರಣಿಕ ಶಕ್ತಿಯ ಮೂಲಕ ಆಸ್ತಿಕ ಬಂಧುಗಳನ್ನು ಕೈ ಬೀಸಿ ಕರೆಯುತ್ತಿರುವ ಮಹಿಷಮರ್ದಿನಿ ಕ್ಷೇತ್ರದಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನಡೆಯಲಿರುವ ನವರಾತ್ರಿ ಉತ್ಸವದ ಸಕಲ ಸಿದ್ಧತೆಗೆ ಭಕ್ತರು ಕೈ ಜೋಡಿಸುತ್ತಿದ್ದಾರೆ.

ನೂರಾರು ವರುಷಗಳ ಇತಿಹಾಸ ಇರುವ ಇತ್ತೀಚೆಗಷ್ಟೇ ಸಂಭ್ರಮದ ಬ್ರಹ್ಮಕಲಶೋತ್ಸವ ನಡೆದಿರುವ ಮಠ ಪರಂಪರೆಯ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವಿಯ ಒಂಬತ್ತು ದಿನಗಳ ಆರಾಧನೆಯ ಪೂರ್ವಭಾವಿಯಾಗಿ ಅಕ್ಟೋಬರ್ 8ರಂದು ಭಕ್ತಾದಿಗಳಿಂದ ಸ್ವಚ್ಛತಾ ಕಾರ್ಯ ನಡೆಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement