Published
1 year agoon
By
Akkare News
ಪುತ್ತೂರು: ರಬ್ಬರ್ ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸನ್ನು ಶೀಘ್ರವೇ ನೀಡುವುದಾಗಿ ಅರಣ್ಯ ಸಚಿವ ಈಶ್ವರಖಂಡ್ರೆ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಭರವಸೆ ನೀಡಿದರು.
ಕಾರ್ಮಿಕರ ಬೋನಸ್ ಬಾಕಿ ಇರುವ ಬಗ್ಗೆ ಕಾರ್ಮಿಕರು ಶಾಸಕರಿಗೆ ಮನವಿ ಮಾಡಿದ್ದರು. ಕಾರ್ಮಿಕರ ಸಮ್ಮುಖದಲ್ಲೇ ಸಚಿವರ ಜೊತೆ ಮಾತುಕತೆ ನಡೆಸಿದ್ದ ಶಾಸಕರು ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸ್ ನ್ನು ಅಗತ್ಯವಾಗಿ ನೀಡಬೇಕಾಗಿದೆ ಎಂದು ಸಚಿವರಲ್ಲಿ ವಿನಂತಿಸಿದ್ದರು.
ಬೋನಸ್ ನೀಡಲು ಕೆಎಫ್‌ಡಿಸಿ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಸಿಗಲು ತಡವಾಗಿರುವ ಕಾರಣ ಮತ್ತೆ ವಿಳಂಬವಾಗಿತ್ತು. ಅ. ೨೬ ರಂದು ಮತ್ತೆ ಅರಣ್ಯ ಸಚಿವರನ್ನು ಭೇಟಿಯಾಗಿ ಶಾಸಕರು ಮಾತುಕತೆ ನಡೆಸಿದ್ದು ಶೀಘ್ರವೇ ಬಾಕಿ ಇರುವ ಬೋನಸನ್ನು ಕಾರ್ಮಿಕರಿಗೆ ನೀಡಲಾಗುವುದು ಎಂದು ಶಾಸಕರಿಗೆ ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾರ್ಮಿಕರು ಬೋನಸ್‌ಗಾಗಿ ಒತ್ತಾಯ ಮಾಡುತ್ತಿದ್ದರು.