ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ನಗರಸಭಾ ಸದಸ್ಯನಿಗೆ ನಗರ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ

Published

on

ನಗರ ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹ ರವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ 2007 ರ ಪುರಸಭಾ ಚುನಾವಣೆಯಲ್ಲಿ ಬಹಳ ಒತ್ತಾಯದಿಂದ ಶಕ್ತಿಸಿನ್ಹ ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದೆವು, ಆ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶಕ್ತಿ ಸಿನ್ಹರವರು ಪುರಸಭಾ ಸದಸ್ಯರಾದರು, ಆ ಬಳಿಕ ಮೂರು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾಗಿ ನೆಲ್ಲಿಕಟ್ಟೆ ವಾರ್ಡ್ ನ್ನು ಸಾಕಷ್ಟು ಅಭಿವೃದ್ಧಿ ಪಡಿಸಿರುತ್ತಾರೆ,ಶಕ್ತಿ ಸಿನ್ಹರವರು ತನ್ನ ವಾರ್ಡಿನ ಜನರ ನಿರೀಕ್ಷೆಗೆ ಮೀರಿ ಕೆಲಸ ಮಾಡಿರುತ್ತಾರೆ. ಬಡವರಿಗೆ ತನ್ನ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದ ಶಕ್ತಿಸಿನ್ಹರವರು ನನ್ನ ಬಹಳಷ್ಟು ಆತ್ಮೀಯರಾಗಿದ್ದರು, ರಾಜಕೀಯವಾಗಿ ನನ್ನ ಪ್ರಬಲ ಬೆಂಬಲಿಗರಾಗಿದ್ದರು. ಇವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನೋವು ಹಾಗೂ ನಷ್ಟ ಉಂಟು ಮಾಡಿರುತ್ತದೆ ದೇವರು ,ಇವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಮಾತನಾಡಿ ಶಕ್ತಿಸಿನ್ಹರವರ ಪರಿಚಯ ಆದದ್ದೇ 2018 ರ ಪುರಸಭಾ ಚುನಾವಣೆ ಸಂದರ್ಭದಲ್ಲಿ, ಅವರ ಶ್ವಾನ ಪ್ರೇಮ ಎಷ್ಟು ಇತ್ತು ಅಂದರೆ ಅವರು ತನ್ನ ಮನೆಯಲ್ಲಿ 35 ನಾಯಿಗಳನ್ನು ಸಾಕುತ್ತಿದ್ದರು ಅಲ್ಲದೆ ಆ ನಾಯಿಗಳನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಿದ್ದರು.

ಇವರು ವಾರ್ಡಿನ ಜನರಿಗೆ ಶಕ್ತಿಸಿನ್ಹ ಎಂದರೆ ತುಂಬಾ ಪ್ರೀತಿ ಮತ್ತು ಗೌರವ ಅಂತಹ ವ್ಯಕ್ತಿಯನ್ನು ನಾವು ಕಳೆದು ಕೊಂಡಿರುವುದು ನಮಗೆಲ್ಲ ದುಃಖ ತಂದಿರುತ್ತದೆ ಎಂದು ಹೇಳಿದರು,

ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ,ಮಾಜಿ ನಗರ ಸಭಾ ಸದಸ್ಯ ಮುಕೇಶ್ ಕೆಮ್ಮಿ0ಜೆ, ಶಕ್ತಿಸಿನ್ಹರವರ ಒಡನಾಡಿ ದಾಮೋದರ ಭಂಡಾರ್ಕರ್ ಶಕ್ತಿಸಿನ್ಹರ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ಶಕ್ತಿಸಿನ್ಹ ಹಾಗೂ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಗಂಗಾಧರ ನಾಯ್ಕ್ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಬ್ಲಾಕ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಮಂಜುನಾಥ್ ಕೆಮ್ಮಾಯಿ, ಸುರೇಶ್ ಪೂಜಾರಿ ಮೊಟ್ಟೆತಡ್ಕ,,ವಿಕ್ಟರ್ ಪಾಯ್ಸ್, ವಾಲ್ಟರ್ ಸಿಕ್ವೆರಾ, ಇಸ್ಮಾಯಿಲ್ ಬೊಲ್ವಾರು,ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮಿ , ನಗರ ಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡ್, ಮಾಜಿ ನಗರ ಸಭಾ ಸದಸ್ಯೆ ಉಷಾಧನಂಜಯ, ನಗರ ಸಭಾ ಸದಸ್ಯರಾದ ಶ್ರೀಮತಿ ಶೈಲಾ ಪೈ, ರೋಬಿನ್ ತಾವ್ರೊ,ಮುಂತಾದವರು ಉಪಸ್ಥಿತರಿದ್ದರು

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಸ್ವಾಗತಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement