Published
1 year agoon
By
Akkare Newsರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಕರಾವಳಿ ಕಲರವ ಮೂಡಲಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೊದಲ ಕಂಬಳ ನಡೆಯಲಿದೆ. ತುಳುನಾಡಿನ ಕಂಬಳದ ಇತಿಹಾಸದಲ್ಲಿಯೇ ಅತಿ ಉದ್ದದ ಟ್ರ್ಯಾಕ್ ಅನ್ನು ಮಾಡಲಾಗುತ್ತದೆ. ನಟಿ ಅನುಷ್ಕಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
“ಸಾಂಪ್ರದಾಯಿಕ ಟ್ರ್ಯಾಕ್ 145 ಮೀಟರ್ ಉದ್ದವಿದೆ. ಈ ಹಿಂದೆ 147 ಮೀಟರ್ ಉದ್ದದ ಟ್ರ್ಯಾಕ್ ಹೊಂದಿರುವ ಕಂಬಳ ಮಾಡಲಾಗಿತ್ತು. ಆದರೆ, ಮೊದಲ ಬೆಂಗಳೂರು ಕಂಬಳಕ್ಕೆ 155 ಮೀಟರ್ ಉದ್ದದ ಕಂಬಳ ಕೆರೆ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ’ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
ಅನುಷ್ಕಾ ಶೆಟ್ಟಿಯಿಂದ ಕಂಬಳ ಉದ್ಘಾಟನೆ
ತೆಲುಗು, ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರೆ. ಅವರು ಕರಾವಳಿಯ ಎಲ್ಲಾ ದೇವರು, ದೈವಗಳ ಪೂಜಾ ಕಾರ್ಯಾಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ದೈವ ಭಕ್ತೆಯಾಗಿರುವ ಅವರು ತಮ್ಮ ಊರಿನ ಎಲ್ಲಾ ದೇವರುಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.