ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ರಾಜ್ಯಮಟ್ಟದಲ್ಲಿ ಜನಪ್ರಿಯತೆ ಪಡೆದ ಪುತ್ತೂರು ಶಾಸಕರು

Published

on

  • ಇಷ್ಟೊಂದು ಜನಪ್ರಿಯತೆಗಳಿಸಲು ಈ ಮೂರು ಕಾರಣಗಳು..!

 

ಪುತ್ತೂರು: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರ ಪೈಕಿ ನಾಲ್ಕೇ ತಿಂಗಳಲ್ಲಿ ರಾಜ್ಯದಲ್ಲೇ ಜನಪ್ರಿಯತೆ ಪಡೆದ ಶಾಸಕರ ಸಾಲಿನಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸೇರಿಕೊಂಡಿದ್ದಾರೆ. ಮೊದಲ ಬಾರಿಗೆ ಶಾಸಕರಾದವರಿಗೆ ಅವರ ಪರಿಚಯ ಆಯಾ ಕ್ಷೇತ್ರದಲ್ಲಿ ಮಾತ್ರ ಇರುತ್ತದೇ ವಿನ ಪಕ್ಕದ ಕ್ಷೇತ್ರಕ್ಕೂ ವಿಸ್ತರಣೆಯಾಗುವುದಿಲ್ಲ. ಅಂತಹುದರಲ್ಲಿ ಪುತ್ತೂರು ಶಾಸಕರು ಇಷ್ಟೊಂದು ಜನಪ್ರಿಯತೆ ಗಳಿಸಲು ಕಾರಣ ಏನು ಎಂಬುದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಅಶೋಕ್ ರೈ ಇಷ್ಟೊಂದು ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಲು ಅವರು ಮಾಡಿದ ನಾಲ್ಕು ಪ್ರಮುಖ ಕೆಲಸಗಳೇ ಕಾರಣ ಎಂದರೆ ತಪ್ಪಾಗಲಾರದು.

ಅಧಿವೇಶನದಲ್ಲಿ ಮಾಡಿದ ಆ ೧೪ ಪ್ರಶ್ನೆಗಳು

ಮೊಟ್ಟ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿದವರು ಒಂದು ವರ್ಷದ ತನಕ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ, ಕೇಳಿಯೂ ಇಲ್ಲ. ಅದರಲ್ಲೂ ಕರಾವಳಿ ಜಿಲ್ಲೆಗಳಿಂದ ಆಯ್ಕೆಯಗಿ ಹೋದ ಬಹುತೇಕ ಶಾಸಕರು ಅಧಿವೇಶನದಲ್ಲಿ ಬಾಯಿ ತೆರೆಯದವರೂ ಇದ್ದಾರೆ. ಅಧಿವೇಶನದಲ್ಲಿ ಮಾತನಾಡಲು ಮಾಹಿತಿ ಬೇಕಾಗುತ್ತದೆ. ಅಲ್ಲಿ ಮಾತನಾಡುವ ಪ್ರತೀಯೊಂದು ಶಬ್ದಕ್ಕೂ ಬಹಳ ಮಹತ್ವ ಇದೆ ಆ ಕಾರಣಕ್ಕೆ ಕೆಲವು ಶಾಸಕರು ಮಾತನಾಡುವುದೇ ಇಲ್ಲ. ಆದರೆ ಶಾಸಕರಾದ ಅಶೋಕ್ ರೈ ಯವರು ಚೊಚ್ಚಲ ಅಧಿವೇಶನದಲ್ಲಿ ೧೪ ಪ್ರಶ್ನೆಗಳನ್ನು ಸರಕಾರದ ಮುಂದಿಟ್ಟಿದ್ದರು. ಅ ೧೪ ಪ್ರಶ್ನೆಗಳು ಜನರ ಸಮಸ್ಯೆಯಾಗಿತ್ತು. ವಿಶೇಷವಾಗಿ ಬಡವರ ಸಮಸ್ಯೆಯಾಗಿತ್ತು. ಕೃಷಿ ವಿಚಾರ, ರೈತರ ವಿಮಾ ಯೋಜನೆ, ಬೆನ್ನುಮೂಲೆ ಮುರಿತಕ್ಕೊಳಗಾದವರ ಸಮಸ್ಯೆ, ಬಡವರ ನಿವೇಶನ ಸಮಸ್ಯೆ ಹೀಗೇ ಬಡವರ ಸಮಸ್ಯೆಗಳನ್ನೇ ಅವರು ಅಧಿವೇಶನದಲ್ಲಿ ಸರಕಾರದ ಮುಂದಿಡುತ್ತಾರೆ. ಅವರು ಕೇಳಿದ ಪ್ರತೀಯೊಂದು ಪ್ರಶ್ನೆಗೂ ಸರಕಾರದಿಂದ ಉತ್ತರ ಬರುತ್ತದೆ. ಅಧಿವೇಶನದಲ್ಲಿ ಬಡವರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ…

ಅಧಿವೇಶನದಲ್ಲಿ ತುಳು ಭಾಷೆಯ ಬಳಕೆ

ಮೊದಲ ಬಾರಿಗೆ ಅಧಿವೇಶನದಲ್ಲಿ ತುಳುಭಾಷೆಯಲ್ಲಿ ಶಾಸಕರಾದ ಅಶೋಕ್ ರೈ ಮಾತನಾಡುತ್ತಾರೆ. ತುಳುವಿಗೆ ಮಾನ್ಯತೆ ಸಿಗಬೇಕು, ಸಂವಿಧಾನದ ಎಂಟನೇ ಪರಿಚ್ಚೇಧಕ್ಕೆ ಸೇರಿಸಬೇಕು ಎಂದು ಭಾಷಣದಲ್ಲಿ ಒತ್ತಾಯ ಮಾಡುವ ಮಂದಿ ಆ ಭಾಷೆಯನ್ನು ಮಾತನಾಡುವಲ್ಲಿ ಮಾತನಾಡಿರಲಿಲ್ಲ. ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡುತ್ತಾರೆ. ಇವರು ಮಾತನ್ನು ರಾಜ್ಯದ ಜನತೆ, ಕರಾವಳಿಯ ತುಳು ಭಾಷಿಗರು ಆಲಿಸಿದ್ದಾರೆ. ತುಳು ಭಾಷೆಗಾಗಿ ಹೋರಾಟ ಮಾಡುವವರಿಗೆ, ತುಳು ಸಂಘಟನೆಗಳಿಗೆ ಗೌರವ ತಂದು ಕೊಟ್ಟಿದ್ದಾರೆ. ಇವರು ಅಧಿವೇಶನದಲ್ಲಿ ಆಡಿದ ತುಳು ಮಾತು ವಿಧಾನಸಭಾ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ೩ ಮಿಲಿಯನ್ ಜನತೆ ವೀಕ್ಷಿಸಿದ್ದಾರೆ. ದೇಶ, ವಿದೇಶಗಳಲ್ಲಿರುವ ತುಳುನಾಡಿನ ಮಂದಿ ವೀಕ್ಷಣೆ ಮಾಡಿದ್ದಾರೆ….

ರಾಜಧಾನಿ ಕಂಬಳ

ದೇಶದ ಇತಿಹಾಸದಲ್ಲೇ ಮೊದಲು ಎಂಬಂತೆ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಉಳಿಸಲು ಸುಪ್ರಿಂ ಮೆಟ್ಟಿಲೇರಿದ್ದ ಶಾಸಕರಾದ ಅಶೋಕ್ ರೈಯವರು ಕಂಬಳ ಪರ ತೀರ್ಪು ತರುವಲ್ಲಿ ಮತ್ತು ಅದನ್ನು ಉಳಿಸುವಲ್ಲಿ ಯಸಶ್ವಿಯಾಗಿದ್ದರು. ಇದೀಗ ಕಂಬಳವನ್ನು ರಾಜ್ಯದ ರಾಜಧಾನಿಯಲ್ಲಿ ಬೆಂಗಳೂರು ಕಂಬಳ_ ನಮ್ಮ ಕಂಬಳ ಎಂಬ ಧ್ಯೇಯ ವಾಕ್ಯ್ಡಿ ತುಳುವರನ್ನು ಒಗ್ಗೂಡಿಸಿ ಕಂಬಳವನ್ನು ಆಯೋಜನೆ ಮಾಡಿದ್ದಾರೆ. ಈ ಕಂಬಳವನ್ನು ರಾಜ್ಯ, ದೇಶದಾದ್ಯಂತ ಲಕ್ಷಾಂತರ ಮಂದಿ ವೀಕ್ಷಣೆ ಮಾಡಲಿದ್ದಾರೆ. ಘಟಾನುಘಟಿ ರಾಜಕಾರಣಿಗಳು, ಸಿನಿಮಾ ನಟರುಗಳು, ಬಾಲಿವುಡ್ ನಟರು, ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಕಂಬಳ ರಾಷ್ಟ್ರಮಟ್ಟದ ಕ್ರೀಡೆಯಾಗಿ ರಾಜ್ಯದ ರಾಜಧಾನಿಯಲ್ಲಿ ಮಿಂಚುವಂತೆ ಮಾಡಲಿದ್ದು ಇದರ ಪೂರ್ತಿ ನೇತೃತ್ವ ಶಾಸಕ ಅಶೋಕ್ ರೈ ಅವರz…

ಮುತ್ತಿಗೆ ಹಾಕುವ ಬಡವರು

ಬಹುಶ ಇದು ಮೊದಲ ಬಾರಿ ಎಂದರೂ ತಪ್ಪಾಗಲಾರದು. ಒಬ್ಬ ಶಾಸಕ ತನ್ನ ಕ್ಷೇತ್ರದಾದ್ಯಂತ ನಿತ್ಯ ಸಂಚಾರ ಮಾಡುತ್ತಾರೆ. ಕಚೇರಿಯಲ್ಲಿ ೬ ಮಂದಿ ಸಾರ್ವಜನಿಕರ ಕೆಲಸಕ್ಕಾಗಿ ಪಿಎ ಗಳನ್ನು ಇಟ್ಟುಕೊಂಡಿದ್ದಾರೆ. ಕ್ಷೇತ್ರದ ಜನತೆಗೆ ಸಹಾಯ ಮಾಡುವ ಉzಶದಿಂದ ತನ್ನ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಕಚೇರಿಗೆ ನಿತ್ಯವೂ ಜನರು ಬಂದು ತಮ್ಮ ಕೆಲಸಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದಾರೆ. ಪಕ್ಷ, ಜಾತಿ, ಧರ್ಮಗಳ ಬೇದ ಭಾವವಿಲ್ಲದೆ ಎಲ್ಲರೂ ಬಂದು ನೆರವು ಪಡೆದುಕೊಳ್ಳುತ್ತಿದ್ದಾರೆ. ಶಾಸಕರು ಕಚೇರಿಯಲ್ಲಿರುವಾಗ ನೂರಾರು ಮಂದಿ ಬರುತ್ತಾರೆ. ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ, ನೆರವು ಪಡೆದುಕೊಳ್ಳುತ್ತಾರೆ. ಶಾಸಕರು ಆಯ್ದ ಮಂದಿಗೆ ಆರ್ಥಿಕ ನೆರವನ್ನೂ ನೀಡುತ್ತಾರೆ. ಒಬ್ಬ ಶಾಸಕರ ಕಚೇರಿಗೆ ನಿತ್ಯ ನೂರಾರು ಮಂದಿ ಬರುವುದೆಂದರೆ ಅದು ತಮಾಷೆಯ ವಿಚಾರವಲ್ಲ. ಜನ ಯಾಕೆ ಬರುತ್ತಾರೆ? ಶಾಸಕರ ಕಚೇರಿಗೆ ಹೋದರೆ ಕೆಲ ಆಗುತ್ತದೆ, ನೆರವು ದೊರೆಯುತ್ತದೆ ಎಂಬ ಕಾರಣಕ್ಕೆ ದಿನದಿಂದ ದಿನಕ್ಕೆ ಕಚೇರಿಗೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಈ ಸನ್ನಿವೇಶ ಬಹುಶ ಪುತ್ತೂರು ಶಾಕರಾದ ಅಶೋಕ್ ರೈ ಕಚೇರಿಯಲ್ಲಿ ಮಾತ್ರ ಎಂದರೆ ಅತಿಶಯೋಕ್ತಿಯಾಗದು. ಶಾಸಕರ ಕಚೇರಿಗೆ ಬರುವ ಬಹುತೇಕರಲ್ಲಿ ಬಡವರೇ ಹೆಚ್ಚು. ಮನೆ ಇಲ್ಲದವರು, ಅನಾರೋಗ್ಯ ಪೀಡಿತರು, ಮನೆ ದುರಸ್ಥಿಗೆ ಅನುದಾನ ಕೇಳುವವರು ಹೀಗೇ ಸಮಸ್ಯೆಗಳ ಸಾಲನ್ನೇ ಹೊತ್ತು ತನ್ನ ಬಳಿ ಬರುವ ಮಂದಿಗೆ ಆರ್ಥಿಕ ಸಹಾಯ ನೀಡುತ್ತಿದ್ದು ಬಡವರ ಪಾಲಿಗೆ ಇದೊಂದು ವರದಾನವಾಗಿರುವುದು ಮಾತ್ರವಲ್ಲದೆ ಕಚೇರಿಗೆ ಬರುವ ಕಡು ಬಡವರು ಶಾಸಕರೇ ನೀವೇ ನಮ್ಮ ದೇವರು ಎಂದು ಹೇಳುವವರೂ ಇದ್ದಾರೆ.

ಮೇಲಿನ ಈ ನಾಲ್ಕು ಪ್ರಮುಖ ಕಾರಣಗಳಿಂದ ಇಂದು ಪುತ್ತೂರು ಶಾಸಕರು ರಾಜ್ಯಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸೇವೆ ಜನರಿಗೆ ಇನ್ನಷ್ಟು ಹತ್ತಿರವಾಗಲಿ ಎಂಬ ಆಶಾಭಾವ ಪುತ್ತೂರು ನಾಗರಿಕರದ್ದು. ರಾಜ್ಯಮಟ್ಟದಲ್ಲಿ ಜನಪ್ರಿಯತೆ ಪಡೆದ ನಮ್ಮೂರ ಶಾಸಕರು ಮುಂದೆ ರಾಷ್ಟ್ರಮಟ್ಟದಲ್ಲೂ ಮಿಂಚಲಿ ಎಂಬ ಹಾರೈಕೆ ಕ್ಷೇತ್ರದ ಜನರದ್ದು.

Continue Reading
Click to comment

Leave a Reply

Your email address will not be published. Required fields are marked *

Advertisement