Published
1 year agoon
By
Akkare News
ಪುತ್ತೂರು:ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಸಮಾವೇಶ, ವಸ್ತ್ರ ವಿತರಣಾ ಕಾರ್ಯಕ್ರಮ `ಸೇವಾ ಸೌರಭ’ ಮತ್ತು ಗೂಡು ದೀಪ ಸ್ಪರ್ಧೆ ನ.೧೩ರಂದು ಇಲ್ಲಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.
ಬೆಳಗ್ಗೆಯಿಂದ ಸಂಜೆ ತನಕ ನಿರಂತರವಾಗಿ ವಸ್ತ್ರ ವಿತರಣೆ ನಡೆದಿದ್ದು ಸುಮಾರು ೬೫ ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರ ವಿತರಣೆ,ಸಹಭೋಜನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಇತಿಹಾಸ ಸೃಷ್ಟಿಸಿದೆ.
r
ದ.ಕ.ಜಿಲ್ಲೆಯ ಸಂಸ್ಕೃತಿಯ ಸಾರ ಪುತ್ತೂರಿನ ಈ ಮೈದಾನದಲ್ಲಿ ಕಾಣಸಿಗುತ್ತದೆ.ಒಂದೇ ತಾಯಿಯ ಮಕ್ಕಳಂತೆ ಇಲ್ಲಿ ಎಲ್ಲರೂ ಸೇರಿದ್ದೀರಿ.ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು `ಸೇವಾ ಸೌರಭ’ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.