Published
1 year agoon
By
Akkare Newsಕತಾರ್: ಗೂಢಚರ್ಯೆ ಆರೋಪದಲ್ಲಿ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಸಿಬಂದಿಗಳಿಗೆ ಕತಾರ್ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆಯ ವಿರುದ್ಧದ ಭಾರತದ ಮೇಲ್ಮನವಿಯನ್ನು ಕತಾರ್ ಕೋರ್ಟ್ ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ.
ಗೂಢಚರ್ಯೆ ಆರೋಪದಲ್ಲಿ ಭಾರತದ ಎಂಟು ಮಂದಿ ನೌಕಾಪಡೆಯ ಮಾಜಿ ಸಿಬಂದಿಗಳಿಗೆ ಕತಾರ್ ನ್ಯಾಯಾಲಯ ಇತ್ತೀಚೆಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಮರಣದಂಡನೆ ಒಳಗಾಗಿರುವ ನೌಕಾಪಡೆಯ ಸಿಬಂದಿಗಳು ಕಳೆದ ವರ್ಷ ಆಗಸ್ಟ್ ನಿಂದ ಜೈಲಿನಲ್ಲಿದ್ದಾರೆ. ಆದರೆ ಅವರ ವಿರುದ್ಧದ ಆರೋಪಗಳನ್ನು ಕತಾರ್ ಅಧಿಕಾರಿಗಳು ಬಹಿರಂಗಗೊಳಿಸಿಲ್ಲವಾಗಿತ್ತು.
ಇದೀಗ ಮರಣದಂಡನೆ ಶಿಕ್ಷೆಯ ತೀರ್ಪಿನ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿದ್ದು, ಕತಾರ್ ಕೋರ್ಟ್ ಮೇಲ್ಮನವಿ ವಿಚಾರಣೆ ಕುರಿತು ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.