ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಿಟ್ಲ‌ ಸರಕಾರಿ ಪ್ರೌಢ ಶಾಲೆಗೆ ಪಿ ಎಂ ಶ್ರೀ ಯೋಜನೆಯ ಮೂಲಕ 5 ಕೋಟಿ ಅನುದಾನ ಬರಲಿದೆ :ಶಾಸಕ ಅಶೋಕ್ ರೈ

Published

on

ಪುತ್ತೂರು:ನ 28ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಸರಕಾರಿ ಪ್ರೌಢ ಶಾಲೆ ಕ್ಷೇತ್ರದ ಮಾದರಿ ಶಾಲೆಯಾಗಿದೆ. ಈ ಶಾಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲು ಇಲ್ಲಿನ ಆಡಳಿತ, ಪೋಷಕರು ಹಾಗೂ ಶಾಲೆಯ ಶಿಕ್ಷಕರೇ ಕಾರಣರಾಗಿದ್ದಾರೆ. ಎಲ್ಲರ ಸಹಕಾರ ಇದ್ದರೆ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗಿಂತ ಉನ್ನತವಾಗಿ ಮಾಡಬಹುದಾಗಿದೆ ಎಂಬುದಕ್ಕೆ ವಿಟ್ಲ ಪ್ರೌಢ ಶಾಲೆಯೇ ಉದಾಹರಣೆಯಾಗಿದೆ ಎಂದು ಶಾಸಕರು ಹೇಳಿದರು.

ವಿಟ್ಲ ಸರಕಾರಿ ಪ್ರೌಢ ಶಾಲೆಯನ್ನು ಪಿಎಂಸಿ ಯೋಜನೆಗೆ ಅನುಮೋದಿಸಲಾಗಿದ್ದು ಈ ಮೂಲಕ ಶಾಲೆಗೆ 5 ಕೋಟಿ ಅನುದಾನ ಬರಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗ‌ಪ್ರತಿಭೆಯನ್ನು ನಾವು ಗೌರವಿಸಬೇಕು. ಪ್ರತಿಭೆ ಸಣ್ಣದಿರಲಿ,ದೊಡ್ಡದಿರಲಿ ಅದೆಲ್ಲವೂಪ್ರತಿಭೆಯೇ ಆಗಿದೆ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯವಾಗಿದೆ. ಶಾಲೆಯಲ್ಲಿ ಕೇವಲ 40% ಶಿಕ್ಷಣ ದೊರೆಯಬಹುದು ಉಳಿದ. 60% ಶಿಕ್ಷಣ ಮನೆಯಲ್ಲೇ ದೊರೆಯಬೇಕು. ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ವನ್ನು ಪೋಷಕರು ನಿರ್ಮಾಣ‌ಮಾಡಬೇಕು. ಮಕ್ಕಳು ತಪ್ಪು ಮಾಡಿದರೆ ತಿದ್ದುವ ಕೆಲಸವನ್ನು ಪೋಷಕರು ಮಾಡಬೇಕೇ ಅವರಿಗೆ ಅಪಮಾನ ಮಾಡುವ ಕೆಲಸವನ್ನು ಮಾಡಬಾರದು.

ಸರಕಾರಿ‌ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟಧ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.

 

 

ಎರಡು ಗ್ರಾಮಗಳಿಗೊಂದು ಕೆಪಿಎಸ್ ಸ್ಕೂಲ್: ಮುಂದಿನ ದಿನಗಳಲ್ಲಿ ಎರಡು ಗ್ರಾಮಗಳಿಗೊಂದು ಕೆಪಿಎಸ್ ಸ್ಕೂಲ್ ಆರಂಭವಾಗಲಿದೆ. ಪ್ರತೀಯೊಬ್ಬ ಗ್ರಾಮೀಣ ಮಗು ಆಂಗ್ಲ‌ಮಾಧ್ಯಮ ಕಲಿಯಬೇಕು. ಬಡವನ‌ಮಕ್ಕಳೂ ಇಂಗ್ಲೀಷ್ ಮಾತನಾಡಬೇಕು ಇದುವೇ ಸರಕಾರದ ಉದ್ದೇಶವಾಗಿದೆ. ಶಾಲೆಗಳಲ್ಲಿ ಎಲ್ಲಾ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಮುಂದೆ ಮಕ್ಕಳು ಕಲಿತು ಉನ್ನತ ವ್ಯಕ್ತಿಗಳಾಗಬೇಕು‌ಎಂದು ಹೇಳಿದರು.

ವೇದಿಕೆಯಲ್ಲಿ

ಪಟ್ಟಣ ಪಂಚಾಯತ್ ಸದಸ್ಯರಾದ ರವಿಪ್ರಕಾಶ್, ವಿಕೆಎಂ ಅಶ್ರಫ್, ಸಿಆರ್ ಪಿ ರಾಘವೇಂದ್ರ ಬಲ್ಲಾಳ್,

ಪ್ರೌಢಶಾಲಾ ಮುಖ್ಯ ಶಿಕ್ಷಕಿಯರಾದ ಅನ್ನಪೂರ್ಣ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜ ಕುಮಾರಿ, ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು.

 

ಎಸ್ ಡಿ ಎಂ ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ಸ್ವಾಗತಿಸಿದರು. ಸಹ ಶಿಕ್ಷಕಿ ವಿನೋದ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement