ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಕಲ್ಲೆಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನ ರಸ್ತೆಗೆ ಶಾಸಕರಿಂದ ಗುದ್ದಲಿಪೂಜೆ

Published

on

 

  • ಕ್ಷೇತ್ರದ 50 ರಸ್ತೆಗೆ ಏಕಕಾಲದಲ್ಲಿ ಅನುದಾನ ಬಿಡುಗಡೆಯಾಗಿದೆ; ರೈ

 

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮಾಂತರ ಭಾಗದ ಬಹುಬೇಡಿಕೆಯ ಒಟ್ಟು ೫೦ ರಸ್ತೆಗಳಿಗೆ ಏಕಕಾಲದಲ್ಲಿ ಅನುದಾನ ಬಿಡುಗಡೆಯಾಗಿದ್ದು ಎಲ್ಲಾ ಕಾಮಗಾರಿಗಳಿಗೂ ಗುದ್ದಲಿ ಪೂಜೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

 

ಅವರು ಕಬಕ ಗ್ರಾಮದ ಕಲ್ಲೆಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನದ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

 

ಗ್ರಾಮಾಂತರ ಪ್ರದೇಶದ ರಸ್ತೆಗಳು ಕಾಂಕ್ರಿಟೀಕರಣವಾಗದೆ ಬಾಕಿ ಇದೆ. ಅನೇಕ ಕಡೆಗಳಲ್ಲಿ ಕಾಂಕ್ರಟೀಕರಣವೇ ನಡೆದಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಅಭಿವೃದ್ದಿಯ ಬಗ್ಗೆ ಭರವಸೆಯನ್ನು ನೀಡಿದ್ದೆ ಆ ರಸ್ತೆಗಳನ್ನು ಹಂತಹಂತವಾಗಿ ಕಾಂಕ್ರೀಟ್ ಮಾಡಲಾಗುವುದು. ಕಾಮಗಾರಿ ನಡೆಯುವ ವಏಳೆ ಗ್ರಾಮಸ್ಥರೇ ಗುಣಮಟ್ಟವನ್ನು ಖಾತ್ರಪಡಿಸಿಕೊಳ್ಳಬೇಕು, ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಯಾವುದೇ ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.

 

ಕಾರ್ಯಕ್ರಮದಲ್ಲಿ ಕಬಕ ಕಾಂಗ್ರೆಸ್ ವಲಯಾಧ್ಯಕ್ಷರಾದ ದಾಮೋದರ್ ಮುರ, ಬಾಲಕೃಷ್ಣ ಪೂಜಾರಿ, ಕಬಕ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಪ್ರಶಾಂತ್ ಕಬಕ, ಜಿನ್ನಪ್ಪ ಪೂಜಾರಿ ಮುರ, ನಾರಯಣ ಗೌಡ, ಬೂತ್ ಅಧ್ಯಕ್ಷರಾದ ಸುಂದರ ಸಫಲ್ಯ, ಸತೀಶ್ ಜೆ ಪಿ, ಚಂಧ್ರಹಾಸ ಗೌಡ, ಪ್ರಸಾದ್ ಗೌಡ, ದಿನೇಶ್ ಸಫಲ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ಜಾನಕಿ ಬಲಕೃಷ್ಣ ಗೌಡ, ರಶೀದ್ ಮುರ, ಭಾರತಿ ವಿಠಲ್ ಪೂಜಾರಿ, ದೇವಕಿ ಗೌಡ, ದಿನೇಶ್ ಗೌಡ ಶೇವಿರೆ, ಯಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement