Published
1 year agoon
By
Akkare Newsಡಿಸೆಂಬರ್ ತಿಂಗಳ ಮೊದಲ ದಿನವೇ LPG ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು LPG ವಾಣಿಜ್ಯ ಸಿಲಿಂಡರ್ ಗಳು ದುಬಾರಿಯಾಗಿವೆ(LPG cylinder price hike). ಅಂದರೆ ರಿಂದ 19 ಕೆಜಿ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 21 ರೂ. ಹೆಚ್ಚಳ ಮಾಡಲಾಗಿದೆ.
ಹೌದು, ಕೆಲ ಸಮಯದ ಹಿಂದೆ ಕೇಂದ್ರ ಸರ್ಕಾರವು ಗೃಹಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿತ್ತು. ಅದಾದಬಳಿಕ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡುತ್ತಲೇ ಬರುತ್ತಿದೆ. ಅಂತೆಯೇ ಇದೀಗ ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಇಂದು 19 ಕೆಜಿ LPG ಸಿಲಿಂಡರ್ ಬೆಲೆಯ ನ್ನು 21 ರೂ.ಗೆ ಹೆಚ್ಚಿಸಲಾಗಿದೆ.
ಅಂದಹಾಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ನಲ್ಲಿ ಈ ಹೆಚ್ಚಳ ಮಾಡಲಾಗಿದೆ. ಗೃಹಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.