ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಪುತ್ತೂರು ಶಾಸಕರು ಬಹುಮಾನ ನೀಡಿ ಗೌರವಿಸಿದ ಸ್ಪೀಕರ್ ಯು ಟಿ ಖಾದರ್

Published

on

ಪುತ್ತೂರು: ಕಳೆದ ಬಾರಿ ನಡೆದ ವಿಧಾನಸಬಾ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದು ಮಾತ್ರವಲ್ಲದೆ ಸದನ ಮುಗಿಯುವ ತನಕ ಸದನದಲ್ಲೇ ಇದ್ದು ಸದನಕ್ಕೆ ಗೌರವ ಸಲ್ಲಿಸಿದ್ದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಸ್ಪೀಕರ್ ಯು ಟಿ ಖಾದರ್ ಬಹುಮಾನ ನೀಡಿ ಗೌರವಿಸಿದ್ದಾರೆ.

ಶಾಸಕರಾದ ಅಶೋಕ್ ರೈಯವರು ಕಳೆದ ಬಾರಿ ಚೊಚ್ಚಲ ಅದಿವೇಶನದಲ್ಲಿ ಭಾಗವಹಿಸಿದ್ದರು. ಸದನಕ್ಕೆ ಸಮಯಕ್ಕೆ ಸರಿಯಗಿ ಹಾಜರಾಗುವ ಸದಸ್ಯರಿಗೆ ಬಹುಮಾ ನೀಡಿ ಗೌರವಿಸಲಾಗುವುದು ಎಂದು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಯು ಟಿ ಖಾದರ್ ಅವರು ಘೋಷಣೆ ಮಾಡಿದ್ದರು. ಕಳೆದ ಬಾರಿಯ ಅಧಿವೇಶನಕ್ಕೆ ಒಟ್ಟು 10 ಮಂದಿ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಅದಿವೇಶನ ಮುಗಿಯುವ ತನಕವೂ ಸದನದಲ್ಲೇ ಇದ್ದರು. ಹತ್ತು ಮಂದಿಯ ಪೈಕಿ ಪುತ್ತೂರು ಶಾಸಕರಾದ ಅಶೋಕ್ ರ‍್ಯಯವರು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಅಧಿವೇಶನ ಕೊನೇ ಗಳಿಗೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಶಾಸಕ ಅಶೋಕ್ ರಐಯವರನ್ನು ಬಹುಮಾನ ನೀಡಿ ಗೌರವಿಸಿದರು.

ಚೊಚ್ಚಲ ಅಧಿವೇಶನದಲ್ಲಿ 14  ಪ್ರಶ್ನೆಗಳನ್ನು ಕೇಳುವ ಮೂಲಕ ಸುದ್ದಿಯಾಗಿದ್ದ ಶಾಸಕ ಅಶೋಕ್ ರೈಯವರು ತುಳು ಭಾಷೆಯಲ್ಲಿ ಸದನದಲ್ಲಿ ಮಾತನಾಡುವ ಮೂಲಕ ಕೋಟ್ಯತರ ತುಳುವರ ಮನಸ್ಸನ್ನು ಗೆದ್ದಿದ್ದರು. 14 ಪ್ರಶ್ನೆಗಳ ಪೈಕಿ ಬಹುತೇಕ ಪ್ರಶ್ನೆಗಳು ಬಡವರ ಪರವಾಗಿ ಇದ್ದದ್ದು ಇನ್ನೊಂದು ವಿಶೇಷವಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement