ನಮ್ಮೊಂದಿಗೆ ಸಂಪರ್ಕ ಸಾಧಿಸಿ

ತಾಜಾ ಸುದ್ದಿ

ಧರ್ಮಸ್ಥಳದಲ್ಲಿ ಖೋಟ ನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

Published

on

ಧರ್ಮಸ್ಥಳ : ಖೋಟ ನೋಟು ಪ್ರಕರಣದಲ್ಲಿ ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ ಕುಮಾ‌ರ್ ಎಂಬಾತನನ್ನು ಬೆಂಗಳೂರು ಗೊಲ್ಲಹಳ್ಳಿ ಬಸ್ಸು ತಂಗುದಾಣದ ಬಳಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸುಮಾರು 4 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆರೋಪಿ ಕೆಂಪೆರಾಜ್ ಎಂಬಾತನನ್ನು ಚಿಕ್ಕನಾಯಕನಹಳ್ಳಿ ತಾಲೂಕು ಮುಳಬಾಗಿಲು ಬಸ್ಸು ತಂಗುದಾಣದ ಬಳಿಯಿಂದ ಧರ್ಮಸ್ಥಳ ಠಾಣಾ ( ಅಪರಾಧ) ಪಿ.ಎಸ್.ಐ ಸಮರ್ಥ ಆರ್ ಗಾಣಿಗೇ‌ರ್, ಹೆಚ್ ಸಿ 607 ರಾಜೇಶ್ ಎನ್, ಪಿ.ಸಿ 2406 ವಿನಯ ಕುಮಾರ್ ರವರುಗಳ ತಂಡ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement