ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಅಪರಿಚಿತ ವ್ಯಕ್ತಿಯ ಶವ ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಪತ್ತೆ; ಕಾರ್ಯಾಚರಣೆ ಮೂಲಕ ಪೊಲೀಸರಿಗೊಪ್ಪಿಸಿದ ಶೌರ್ಯ ಸ್ವಯಂಸೇವಕರು.

Published

on

ಬೆಳ್ತಂಗಡಿ: ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ (ಡಿಸೆಂಬರ್ 10) ಬೆಳಿಗ್ಗೆ ಪತ್ತೆಯಾಗಿದೆ. ಜನರು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಶವ ತೇಲಿ ಬರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಶವ ತೆಗೆಯುವ ಕಾರ್ಯಾಚರಣೆಗೆ ಸಹಕರಿಸಲು ಪೊಲೀಸರು ಉಜಿರೆ ಘಟಕ ಪ್ರತಿನಿಧಿ ರವೀಂದ್ರ ಇವರಿಗೆ ಬೆಳಿಗ್ಗೆ 5.30 ರ ವೇಳೆಗೆ ಪೋಸ್ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರಾದ ಶಿಶಿಲಾ ಹಾಗೂ ಅರಸಿನಮಕ್ಕಿ ಘಟಕದ ಅವಿನಾಶ್ ಬೀಡೆ , ಉಜಿರೆ ಘಟಕದ ರಾಘವೇಂದ್ರ ಶಶಿಕುಮಾರ್ ಇವರೊಂದಿಗೆ ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.

ಪೊಲೀಸ್ ಠಾಣಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮಕ್ಕಾಗಿ ಶವವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement