Published
1 year agoon
By
Akkare Newsಕಳೆದ ಎರಡುವರೆ ವರ್ಷದಲ್ಲಿ 116ಕ್ಕೂ ಅಭ್ಯರ್ಥಿಗಳು ವಿವಿಧ ಸರಕಾರಿ ನೇಮಕಾತಿಗಳಲ್ಲಿ ಆಯ್ಕೆ ಆಗುವಂತೆ ಮಾಡಿದ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾಥಮಿಕ ಹಂತದಿಂದ IAS, KAS ವರೆಗಿನ ವಿವಿಧ ನೇಮಕಾತಿಗಳ ಪರೀಕ್ಷೆಗಳಿಗೆ ತರಬೇತಿಯನ್ನು 2024ರ ಸಾಲಿನಲ್ಲಿ ಪ್ರಾರಂಭಿಸಲಾಗುತ್ತಿದ್ದು 11/12/2023ರಿಂದ ಪ್ರವೇಶಾತಿ ಪ್ರಾರಂಭಗೊಂಡಿರುತ್ತದೆ.
ಲಭ್ಯವಿರುವ ತರಬೇತಿಗಳು:
KAS , FDA/SDA, PSI/PC, PDO/VA, ಬ್ಯಾಂಕಿಂಗ್ , SSC ,ಅರಣ್ಯ, ರೈಲ್ವೆ, ಅಗ್ನಿಪಥ್ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ನೇಮಕಾತಿಗಳ ತರಬೇತಿಗಳು. GPSTR /HSTR/TET/CTET/KSET/NET ತರಬೇತಿಗಳು.
ತರಬೇತಿಯನ್ನು ನೇರ ತರಗತಿಗಳ ಮೂಲಕ ಪಡೆಯುವವರಿಗಾಗಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ವರೆಗೆ ತರಗತಿಗಳು ಲಭ್ಯವಿರುತ್ತದೆ. ಉದ್ಯೋಗಸ್ಥರು, ವಿದ್ಯಾರ್ಥಿಗಳಿಗಾಗಿ ಹಾಗೂ ಗೃಹಿಣಿಯರಿಗಾಗಿ ರಾತ್ರಿ ದಿನ ನಿತ್ಯ 8 ರಿಂದ 9ರ ಒಂದು ಗಂಟೆಗಳ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ತರಬೇತಿ ಪಡೆಯುವ ಪ್ರತಿ ವಿದ್ಯಾರ್ಥಿಯು ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಪ್ರತಿ ಭಾನುವಾರ ನೀಡಲಾಗುವುದು. ಅಲ್ಲದೇ ಉಚಿತ ಕಂಪ್ಯೂಟರ್ ತರಬೇತಿ, ಉಚಿತವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ, ಪೊಲೀಸ್/ಸೇನೆ ನೇಮಕಾತಿಗಳಿಗೆ ಪ್ರಯತ್ನಿಸುವವರಿಗಾಗಿ ಉಚಿತ ದೈಹಿಕ ಸದೃಢತೆಯ ಮೈದಾನ ತರಬೇತಿಯನ್ನು ನೀಡಲಾಗುವುದು.
ಬ್ಯಾಂಕಿಂಗ್/ ಕೋ- ಆಪರೇಟಿವ್ ಬ್ಯಾಂಕಿಂಗ್ ಇತ್ಯಾದಿ ಪರೀಕ್ಷೆ ಬರೆಯುವವರಿಗಾಗಿ ಪ್ರಾಕ್ಟಿಕಲ್ ಅಕೌಂಟಿಂಗ್ ಕೋರ್ಸ್ ಗಳನ್ನು ಜೊತೆಗೆ ಕಲಿಯಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ವಿವಿಧ ಕಾರ್ಯಗಾರಗಳ ಮೂಲಕ ಉದ್ಯೋಗ ಕೌಶಲ್ಯತೆಗಳನ್ನು ಕಳಿಸಲು ಒತ್ತು ಕೊಡಲಾಗುತ್ತದೆ.
ಕಳೆದ ಎರಡುವರೆ ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕರಾವಳಿ ಭಾಗದಲ್ಲಿ ಜಾಗೃತಿ ಮೂಡಿಸುತ್ತ ಮಹತ್ತರ ಪಾತ್ರವನ್ನು ವಹಿಸಿದ್ದು, ಭಾರತೀಯ ಸೇನೆ ,ಪೊಲೀಸ್, ಅರಣ್ಯ ,ಶಿಕ್ಷಣ , ಸಹಕಾರಿ ಇತ್ಯಾದಿ ವಿವಿಧ ಇಲಾಖ ನೇಮಕಾತಿಗಳಲ್ಲಿ 116 ಮಿಕ್ಕಿದ ಅಭ್ಯರ್ಥಿಗಳು ಆಯ್ಕೆ ಆಗಿರುವುದು ವಿದ್ಯಾಮಾತಾ ಅಕಾಡೆಮಿ ಅತ್ಯುತ್ತಮ ತರಬೇತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ನಿಟ್ಟಿನಲ್ಲಿ 2024ರ ಸಾಲಿನಲ್ಲೂ ಕೇಂದ್ರ, ರಾಜ್ಯ ಸರ್ಕಾರ , ಸರ್ಕಾರಿ ಸ್ವಾಮ್ಯ ವಿವಿಧ ಇಲಾಖೆಗಳ ನೇಮಕಾತಿಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ವಿದ್ಯಾಮಾತಾ ಅಕಾಡೆಮಿಯು ಶ್ರಮಿಸುತ್ತಿದೆ. ಬಿ.ಪಿ.ಎಲ್ ,ಅಂತ್ಯೋದಯ ಕಾರ್ಡ್ ಹೊಂದಿರುವ ಮಧ್ಯಮ/ ಬಡ ಹಿನ್ನಲೆಯ ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 6,000ಗಳ ವಿದ್ಯಾರ್ಥಿವೇತನವನ್ನು ನೀಡಿ ತರಬೇತಿಯನ್ನು ಕೊಡುವುದರ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೂ ವಿಶೇಷವಾದ ಪ್ರೋತ್ಸಾಹವನ್ನು ವಿದ್ಯಾಮಾತಾವು ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ:
ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಫೋನ್ ನಂ. : 9620468869
ಸುಳ್ಯ ಶಾಖೆ :
ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
PH: 9448527606.