Published
2 years agoon
By
Akkare News
ಪುತ್ತೂರು ಡಿ. 11 : ಆತ್ರೇಯ ಮಲ್ಟಿಸ್ಟೆಷಾಲಿಟಿ ಕ್ಲಿನಿಕ್ ಹಾಗೂ ನಂದಿಕೇಶ್ವರ ಭಜನಾ ಮಂದಿರ ವತಿಯಿಂದ ಉಚಿತ ಆರೋಗ್ಯ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಡಿ. 10ರಂದು ಶ್ರೀ ನಂದಿಕೇಶ್ವರ ಭಜನಾ ಮಂದಿರದಲ್ಲಿ ನಡೆಯಿತು.

ಬ್ರಹ್ಮಶ್ರೀ ಕೇಮ್ಮಿಂಜೆ ಲಕ್ಷೀಶ ತಂತ್ರಿಗಳು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು ಅರುಣ್ ಜೈನ ಅವರು ಸಭಾಧ್ಯಕ್ಷತೆ ವಹಿಸಿದರು ವೇದಿಕೆಯಲ್ಲಿ ಬ್ರಹ್ಮಶ್ರೀ ಉದಯ ತಂತ್ರಿಗಳು ಉಪಸ್ಥಿತರಿದ್ದರು ಹಾಗೂ ಶಿಬಿರದ ಸದುಪಯೋಗವನ್ನು ಭಜನಾ ಮಂದಿರದ ಭಕ್ತರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಹಾಗೂ ಆರೋಗ್ಯದ ವಿಚಾರದಲ್ಲಿ ಯಾರೂ ಕಡೆಗಣಿಸದೆ ಇಂತಹ ಶಿಬಿರದ ಮುಖಾಂತರ ಈಸಿಜಿ, ರಕ್ತದ ಒತ್ತಡ, ಮಧುಮೇಹ ತಪಾಸಣೆ ಮಾಡಬೇಕು ಎಂದು ಹಿತ ನುಡಿಗಳನ್ನಡಿದರು. ವೇದಿಕೆಯಲ್ಲಿ ಶ್ರೀ ಸುಧೀಂದ್ರ ತಂತ್ರಿ, ಕೆಮ್ಮಿಂಜೆ ಮತ್ತು ಶ್ರೀ ಚಂದ್ರ ಕೂಡಮಾರಾ ಉಪಸ್ಥಿತರಿದ್ದರು.

ಇದೇ ವೇಳೆ ಬೇಸಿಕ್ ಹೆಲ್ತ್ ಚೆಕಪ್ ಪ್ಯಾಕೇಜನ್ನು ಅನಾವರಣ ಗೊಳಿಸಲಾಯಿತು. ಕೇವಲ ರೂ 1200ಕ್ಕೆ ಕಿಡ್ನಿ ಲಿವರ್ ಹಾರ್ಟ್ ಮಧುಮೇಹ ಕೆ ಸಂಬಂಧಿಸಿದ ವಿವಿಧ ರಕ್ತ ಮತ್ತು ಮೂತ್ರ ಪರೀಕ್ಷೆ ಹಾಗೂ ಈ ಸೀ ಜಿ ಒಳಪ್ಪಟ್ಟಿರುತ್ತದೆ. 70ಕೂ ಅಧಿಕ ಜನ ಸದುಪಯೋಗ ಪಡಿಸಿಕೊಂಡರು ಎಂದು ಡಾ ಸುಜಯ್ ತಂತ್ರಿ ಕೆಮ್ಮಿಂಜೆ ತಿಳಿಸಿದ್ದಾರೆ