ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ಕೇರಳ.ಹೊಸ ರೂಪಾಂತರಿ ವೈರಸ್ ಎರಡು ಬಲಿ ಕೋರೊನಾ ಆರ್ಭಟ ದೇಶದಾದ್ಯಂತ ಆರೋಗ್ಯ ಇಲಾಖೆಯಿಂದ ಐ ಅಲರ್ಟ್..!!!!???

Published

on

ಕಳೆದ ಕೆಲ ದಿನಗಳ ಅಂತರದಲ್ಲಿ ಉತ್ತರ ಕೇರಳದ ಜಿಲ್ಲೆಗಳಲ್ಲಿ ಇಬ್ಬರು ಕೋವಿಡ್ -19 ರ ಹೊಸ ರೂಪಾಂತಾರಿ ವೈರಸ್ ಗೆ (UNT Covid subvariant) ಸಾವನ್ನಪ್ಪಿದ್ದಾರೆ. ಈ ಬಳಿಕ ರಾಜ್ಯಾದ್ಯಂತ ಸೋಂಕಿನ ವಿರುದ್ಧ ಕೇರಳದ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಾಣಿಸಿದೆ.
ಕೋಯಿಕ್ಕೋಡ್ ಜಿಲ್ಲೆಯ ವಟ್ಟೋಲಿಯ ಕಲಿಯಟ್ಟುಪರಂಬತ್ ಕುಮಾರನ್ (77) ಮತ್ತು ಕಣ್ಣೂರು ಜಿಲ್ಲೆಯ ಪಾನೂರಿನ ಪಾಲಕಂಡಿ ಅಬ್ದುಲ್ಲಾ (82) ಈ ನವ ರೂಪಾಂತರಿ ಸೋಂಕಿಗೆ ಬಲಿಯಾದವರು. ಕುಮಾರನ್ ಅವರ ನಿಧನದ ಬಳಿಕ ನಡೆಸಿದ ಲ್ಯಾಚ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ -19 ದೃಢಪಟ್ಟಿತ್ತು. ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ಲಾ ಕೂಡ ಇದೆ ಸೋಂಕಿಗೆ ಬಲಿಯಾಗಿದ್ದಾರೆ. ತಿಂಗಳ ಬಳಿಕ ಕೇರಳದಲ್ಲಿ ಕೋವಿಡ್ ನಿಂದ ಸಾವು ಸಂಭವಿಸಿದೆ.

2020, 2021 ಜಗತ್ತನ್ನೆ ತಲ್ಲಣಿಸುವಂತೆ ಮಾಡಿದ ಕೋವಿಡ್ ಕಳೆದೊಂದು ವರ್ಷದಿಂದ ಕಡಿಮೆಯಾಗಿತ್ತು. 2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದಲ್ಲಿ ಕೊರೊನಾ ಮೊದಲ ಬಾರಿ ಅಟ್ಟಹಾಸ ಮೆರೆದಿತ್ತು. ಇದೀಗ ಸರಿಯಾಗಿ 4 ವರ್ಷ ಬಳಿಕ ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ಕೊರೊನಾ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ.

ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1296 ಕ್ಕೇರಿದೆ ಶುಕ್ರವಾರ ದೇಶದಲ್ಲಿ 17,605 ಮಂದಿಯ ತಪಾಸಣೆ ನಡೆಸಲಾಗಿದ್ದು, 312 ಮಂದಿಗೆ ರೋಗ ದೃಢಪಟ್ಟಿದೆ. ಈ ಪೈಕಿ 280 ರೋಗಿಗಳು ಕೇರಳದಲ್ಲಿದ್ದಾರೆ. ಪರೀಕ್ಷಾ ಧನಾತ್ಮಕತೆಯ ದರ ಶೇ.1.7ಕ್ಕೇರಿದೆ.



ಓಮಿಕ್ರಾನ್‌ನ ಉಪ ರೂಪವಾದ ಜೆಎನ್-1 ಕೇರಳದಲ್ಲಿ ಇರುವುದನ್ನು ಕೇಂದ್ರ ಸರಕಾರ ಶನಿವಾರ ಖಚಿತಪಡಿಸಿದೆ. ಈ ರೂಪಾಂತರಿ ಮೊದಲು ಆಗಸ್ಟ್‌ನಲ್ಲಿ ಲಕ್ಸೆಂಬರ್ಗ್‌ನಲ್ಲಿ ವರದಿಯಾಗಿತ್ತು. ಇದು ಬಳಿಕ ಇತರ ದೇಶಗಳಿಗೆ ಹರಡಿದೆ. ಬಿಎ 2.86 ರೂಪಾಂತರವನ್ನು ಪಿರೋಲಾ ಎಂದೂ ಕರೆಯಲಾಗುತ್ತದೆ. ಇದು ಇತ್ತೀಚೆಗೆ ಯುಎಸ್ ಮತ್ತು ಚೀನಾದಲ್ಲಿ ಪತ್ತೆಯಾಗಿದೆ.ಜೆಎನ್ ೧ ರೂಪಾಂತರಿ ವೈರಸ್ ಆನ್ನೇಯ ಏಷ್ಯಾದ ದೇಶಗಳಾದ ಸಿಂಗಾಪುರ ಮತ್ತು ಇಂಡೋನೇಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆಜೆ ಎನ್-1 ಕೋವಿಡ್‌ ಅದೇ ಸಾಮಾನ್ಯ ಲಕ್ಷಣಗಳನ್ನು ಹೊಂದಿದೆ ಇದೇ ವೇಳೆ ಚೀನಾದಲ್ಲಿ ಹೊಸ ಕೋವಿಡ್ ರೂಪಾಂತರವೂ ದೃಢಪಟ್ಟಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement