Published
1 year agoon
By
Akkare Newsಡಿ.21.‘ಅರುಣಾಚಲ ಪ್ರದೇಶ’ದಿಂದ ಚಾಲನೆ ರಾಹುಲ್ ಗಾಂಧಿ ಜನವರಿ ಎರಡನೇ ವಾರದಿಂದ ಭಾರತ್ ಜೋಡೋ ಯಾತ್ರಾ ಭಾಗ-2ನ್ನ ಪ್ರಾರಂಭಿಸಲಿದ್ದಾರೆ. ಕಾಂಗ್ರೆಸ್ ಸಂಸದರು ಅರುಣಾಚಲ ಪ್ರದೇಶದಿಂದ ಗುಜರಾತ್’ಗೆ ಪ್ರಯಾಣಿಸಲಿದ್ದಾರೆ.CWC ಸಭೆಯಲ್ಲಿ ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಭಾರತ್ ಜೋಡೋ ಯಾತ್ರಾ ಭಾಗ 2ನ್ನ ಪ್ರಸ್ತಾಪಿಸಿದರು.
ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕಳಪೆ ಪ್ರದರ್ಶನ ನೀಡಿದ ನಂತರ 2024 ರಲ್ಲಿ ನಡೆಯಲಿರುವ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸುವ ಗುರಿಯನ್ನ ಈ ಯಾತ್ರೆ ಹೊಂದಿದೆ.ಯಾತ್ರೆಯ ಮೊದಲ ಹಂತವು ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿ 12 ರಾಜ್ಯಗಳ ಮೂಲಕ ಹಾದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಂಡಿತು – ಸುಮಾರು 136 ದಿನಗಳ ಅವಧಿಯಲ್ಲಿ 4000 ಕಿಲೋಮೀಟರ್ ದೂರವನ್ನ ಕ್ರಮಿಸಲಾಯಿತು.