Published
2 years agoon
By
Akkare News
ಬೆಂಗಳೂರು : ಕೇರಳದಲ್ಲಿ ಸಾಲು ಸಾಲು ಹೊಸ ಕೋವಿಡ್ ಪ್ರಕರಣ ಬೆನ್ನಲ್ಲೇ ಬೆಂಗಳೂರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ 20 ದಿನದಲ್ಲಿ ಬೆಂಗಳೂರಿನಲ್ಲೂ 17 ಹೊಸ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬಿಬಿಎಂಪಿಯ ಎಂಟು ವಲಯಗಳಲ್ಲಿ ಒಟ್ಟು 17 ಕೊರೋನಾ ಕೇಸ್ ಪತ್ತೆಯಾಗಿದೆ. ಕೊರೊನಾದಿಂದ ಗುಣಮುಖರಾದವರ ಪೈಕಿ ಶೇ.6ರಷ್ಟು ಮಂದಿ ನಿಧನ
ಬಿಬಿಎಂಪಿಯ ಪೂರ್ವ ವಲಯದಲ್ಲಿ ಅತಿ ಹೆಚ್ಚು ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಪೂರ್ವ ವಲಯದಲ್ಲಿ 11 ಹಾಗೂ ಪಶ್ಚಿಮ 09 ಹಾಗೂ ಬೊಮ್ಮನಹಳ್ಳಿ 08 ಕೇಸ್ ಹೊಸದಾಗಿ ದಾಖಲಾಗಿದ್ದು, 17 ಜನರ ಪೈಕಿ 2 ಗಂಭೀರ ಸಮಸ್ಯೆಯೊಂದಿಗೆ ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ಕೇಸ್ ಪತ್ತೆ :
ಬೊಮ್ಮನಹಳ್ಳಿ : 08
ದಾಸರಹಳ್ಳಿ : 00
ಪಶ್ಚಿಮ ವಲಯ : 09
ಮಹಾದೇವಪುರ : 06
ಆರ್ ಆರ್ ನಗರ : 00
ದಕ್ಷಿಣ ವಲಯ : 07
ಪೂರ್ವ ವಲಯ : 11
ಯಲಹಂಕ : 01
ಕೊರೋನಾದ ಹೊಸ ರೂಪಾಂತರಿ JN.1 ಪತ್ತೆಯಾಗಿದ್ದು, ಪಾಲಿಕೆ ಕಳೆದ 20 ದಿನದಲ್ಲಿ ದಾಖಲಾಗಿರುವ 17 ಮಂದಿಯ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ. ಹೀಗಾಗಿ 17 ಪ್ರಕರಣಗಳ ಪೈಕಿ ಇಬ್ಬರು 60 ಮೇಲ್ಪಟ್ಟ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಇಬ್ಬರು ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಮುಂದುವರೆದಿದೆ.



