ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆಕಸ್ಮಿತ ಬೆಂಕಿ ಅವಘಡ ಮಧ್ಯರಾತ್ರಿ ನಡೆದ ಘಟನೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕದಳ ಬೆಂಕಿ ನಂದಿಸವಲ್ಲಿ ಯಶಸ್ಸಿಯಾಗಿದೆ.ಹವಾನಿಯಂತ್ರಿತ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ತಗುಲಿದ್ದು, ತಕ್ಷಣ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿ ನಂದಿಸುವ ಕೆಲಸ ವಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರು, “ಹವಾನಿಯಂತ್ರಿತ ಘಟಕದ ಚಿಪ್ಪು ಒಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ, ಹವಾನಿಯಂತ್ರಿತ ಯಂತ್ರ ಸಹಿತ ಅದರ ಬಳಿ ಇದ್ದ ಕೆಲವು ಉಪಕರಣಕ್ಕೆ ಹಾನಿಯಾಗಿದೆ. ತಿವ್ರ ನಿಗಾ ಘಟಕದಲ್ಲಿ ಇಬ್ಬರು ರೋಗಿಗಳಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಮಾಹಿತಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈಯವರು ಧಾವಿಸಿದ್ದಾರೆ. ಪುತ್ತೂರಿನ ವಿಹಿಂಪ ಕಛೇರಿಯಲ್ಲಿ ತಂಗಿದ್ದ ದತ್ತ ಮಾಲಾಧಾರಿಗಳು, ಹಾಗೂ ಸ್ಥಳೀಯ ಯುವಕರು ಬೆಂಕಿ ನಂದಿಸಲು ಅಗ್ನಿ ಶಾಮಕ ದಳಕ್ಕೆ ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ. ತಡ ರಾತ್ರಿ 12:30 ರಿಂದ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ತಕ್ಷಣವೇ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿತು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಸ್ಪತ್ರೆ ಅಡಳಿತ ಅಧಿಕಾರಿ ಡಾ.ಅಶಾ ಪುತ್ತೂರಾಯ ಮತ್ತು ಅಸ್ಪತ್ರೆ ಸಿಬಂದಿಗಳು ರೋಗಿಗಳನ್ನು ಬೆಂಕಿ ತಗುಲಿದ ಕೋಠಡಿಯಿಂದ ತೆರವುವಗೊಳಿಸಿದ್ದರು.



ವಿಷಯ ತಿಳಿದ ತಕ್ಷಣವೇ ಪುತ್ತೂರು ವಿಶ್ವಹಿಂದೂ ಪರಿಷದ್ ಕಾರ್ಯಲಾಯದಲ್ಲಿ ಇದ್ದ ಬಜರಂಗದಳದ ದತ್ತ ಮಾಲಾದರಿಗಳು ಸ್ಥಳಕ್ಕೆ ಅಗಮಿಸಿ ಇಡಿ ಅಸ್ಪತ್ರೆಯಲ್ಲಿ ಬೂದಿಗಳಿಂದ ಕೂಡಿದ ಕೊಠಡಿಗಳನ್ನು ನೀರಿನಿಂದ ಸ್ವಚ್ಚಗೊಳಿಸಿದ್ದಾರೆ.ಮಂಗಳೂರಿನಲ್ಲಿದ್ದ ಪುತ್ತೂರಿನ ಶಾಸಕರಿಗೆ ವಿಷಯ ತಿಳಿದ ತಕ್ಷಣವೇ ಮಂಗಳೂರಿನಿಂದ ಪುತ್ತೂರು ಸರಕಾರಿ ಅಸ್ಪತ್ರೆಗೆ ಅಶೋಕ್ ರೈ ದೌಡಯಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement