ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ವಾಹನ ಮಾಲಕರೇ ಮತ್ತು ಸಾರ್ವಜನಿಕರೇ ಗಮನಿಸಿ….. ಹೈಟೆಕ್‌ ರೂಪ ಪಡೆಯಲಿದೆ. ಡಿ. ಎಲ್. ಮತ್ತು ಆರ್. ಸಿ. ಮಹತ್ವದ ಮಾಹಿತಿ.

Published

on

ಚಾಲನಾ ಪರವಾನಿಗೆ (ಡಿಎಲ್‌) ಮತ್ತು ವಾಹನಗಳ ನೋಂದಣಿ (ಆರ್‌ಸಿ) ಸ್ಮಾರ್ಟ್‌ ಕಾರ್ಡ್‌ಗಳಿಗೆ ಹೈಟೆಕ್‌ ರೂಪ (DL, RC Smart Card With QR Code) ನೀಡಲು ಕೇಂದ್ರ ಸರಕಾರ ಯೋಜನೆ ಮಾಡಿದೆ. ಈ ಕುರಿತು 2024ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.ಈ ಕುರಿತು ವರದಿಯನ್ನು ಪರಿಶೀಲಿಸಿ ಏಜೆನ್ಸಿವೊಂದರಕ್ಕೆ ಸಾರಿಗೆ ಇಲಾಖೆ ಜವಾಬ್ದಾರಿ ನೀಡಿದೆ. ಡಿಎಲ್‌ನ ಮುಂಭಾಗದಲ್ಲಿ ಹೆಸರು, ಫೋಟೋ, ವಿಳಾಸ, ಜನ್ಮದಿನಾಂಕ, ರಕ್ತದ ಗುಂಪು ಇರಲಿದೆ. ಹಿಂಭಾಗದಲ್ಲಿ ಮೊಬೈಲ್‌ ನಂಬರ್‌, ವಾಹನ ಚಲಾಯಿಸಲಿರುವ ಅನುಮತಿ ವಿವರ ಇರಲಿದೆ.

ಹಾಗೆನೇ ಹೊಸ ಆರ್‌ಸಿ ಕಾರ್ಡ್‌ನ ಮುಂಭಾಗದಲ್ಲಿ ವಾಹನ ನೋಂದಣಿ ಸಂಖ್ಯೆ, ಅವಧಿ ಮುಕ್ತಾಯ, ಇಂಜಿನ್‌ ನಂಬರ್‌, ಚಾಸ್ಸಿ ನಂಬರ್‌, ನೋಂದಣಿ ದಿನಾಂಕ ಇರಲಿದ್ದು, ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿ ವಾಹನಕ್ಕೆ ಸಂಬಂಧಿಸಿದ ವಿವರಗಳು ಇರಲಿದೆ. ಹಾಗೆನೇ ಈ ಸ್ಮಾರ್ಟ್‌ಕಾರ್ಡ್‌ನಲ್ಲಿ ಕ್ಯೂಆರ್‌ ಕೋಡ್‌ ಇರಲಿದೆ.



Continue Reading
Click to comment

Leave a Reply

Your email address will not be published. Required fields are marked *

Advertisement