Published
12 months agoon
By
Akkare Newsಪುತ್ತೂರು: ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಬಲಿಷ್ಡ ಸಮಾಜದ ನಿರ್ಮಾಣಕ್ಕೆ ಶ್ರಮ ಪಡಬೇಕಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಆರ್ಯಾಪು ಗ್ರಾಮದ ಕಂಬಲದಡ್ಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿಗಳಿಗೆ ಮಕ್ಕಳನ್ನು ದಾಖಲಿಸುವ ಮೂಲಕ ನಾವು ಪುಟ್ಟ ಹೃದಯಗಳಿಗೂ ಸಂಸ್ಕಾರದ ಶಿಕ್ಷಣ ಎಳೆಯದರಲ್ಲೇ ನೀಡಬೇಕು ಎಂದು ಹೇಳಿದರು.ಇದೇ ವೇಳೆ ನಾಲ್ವರು ವೇದಿಕೆಯಲ್ಲಿ ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ,ಉಪಾಧ್ಯಕ್ಷೆ ಅಶೋಕ ನಾಯ್ಕ,ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ,ಗ್ರಾಪಂ ಪಿಡಿಒ ನಾಗೇಶ್, ಗ್ರಾ.ಪಂ ಸದಸ್ಯರುಗಳಾದ ಪೂರ್ಣಿಮಾ, ರತ್ನಾವತಿ ,ಪವಿತ್ರ ರೈ ,ಮಂಜಪ್ಪ ರೈ ಬಾರಿಕೆ, ಸಂತೋಷ್ ಸುವರ್ಣ ಮೇರ್ಲ,ಚಕ್ರರಾಜೇಶ್ವರಿ ದೇವಸ್ಥಾನ ಬೂಡಿಯಾರ್ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ,ಜಿಲ್ಲಾ ಕಾಂಗ್ರೆಸ್ ಸದಸ್ಯ ರಾದ ಅಶೋಕ್ ಸಂಪ್ಯ, ಸಂತೋಷ್ ಸುವರ್ಣ ಮೇರ್ಲ, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ಮೇರ್ಲ, ಬೂತ್ ಅಧ್ಯಕ್ಷ ಶಿವಪ್ರಸಾದ್ ನಾಯಕ್, ಮಾಜಿ ಗ್ರಾಪಂ ಸದಸ್ಯ ಜಬ್ಬಾರ್ ಸಂಪ್ಯ, ಸಲಾಂ ಸಂಪ್ಯ, ಅಜಿತ್ ಹೊಸಮನೆ ಗುತ್ತಿಗೆದಾರ ಮೊದಲಾದವರು ಉಪಸ್ಥಿತರಿದ್ದರು.