Published
12 months agoon
By
Akkare Newsಕಡಬ ತಾಲೂಕು ಕಾಯ್ಮಣ ಗ್ರಾಮದ ಅಗಳಿ ಸದಾಶಿವ ದೇವಸ್ಥಾನದಲ್ಲಿ ಜ.15,16ರಂದು ಶ್ರೀ ದೇವರ ವಾರ್ಷಿಕ ಜಾತ್ರೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ, ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ,ಉದಯ ಕುಮಾರ್ ಅಗಳಿ, ಅರ್ಚಕ ಈಶ್ವರ ಚಂದ್ರ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ ಅಗಳಿ, ಭವಾನಿ ಶಂಕರ ಅಗಳಿ, ರಾಧಾಕೃಷ್ಣ ಬೈತಡ್ಕ, ಹರೀಶ್ ಮುಂಡಾಳ, ಮಾಧವಿ ಬೋಮ್ಮೊಡಿ,ತಾರ ಬೆಳಂದೂರು, ಮೋನಪ್ಪ ಗೌಡ ಕೂರೋಡಿ, ಲಿಂಗಪ್ಪ ಗೌಡ ಅಗಳಿ, ಶ್ರೀಧರ ಗೌಡ ಅಗಳಿ, ಪದ್ಮಯ್ಯ ಗೌಡ ಅಗಳಿ ಸೇರಿದಂತೆ ಹಲವು ಜನ ಭಕ್ತಾದಿಗಳು ಉಪಸ್ಥಿತರಿದ್ದರು.