ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಆರೋಗ್ಯ

ಕೋವಿಡ್ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ , ಕೋವಿಡ್ ಬಂದರೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು: ಸಚಿವ ದಿನೇಶ್ ಗುಂಡೂರಾವ್

Published

on

ರಾಜ್ಯದಲ್ಲಿ ಕೊರೋನಾ ಉಪತಳಿ ಜೆಎನ್.1 ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ, ಚಿಕಿತ್ಸಾ ಸಿದ್ದತೆ ಕುರಿತು ಆಸ್ಪತ್ರೆಗಳಿಗೆ ಮಾರ್ಗಸೂಚಿ ಸಿದ್ಧಪಡಿಸಲು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟದ ಉಪ ಸಮಿತಿಯ ಸಭೆ ನೆರವೇರಿತು.

ಆರೋಗ್ಯ ಇಲಾಖೆಯಿಂದ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಕಿಡ್ನಿ, ಹೃದಯ ಇತರ ಕಾಯಿಲೆ ಹೊಂದಿದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಸಾರ್ವಜನಿಕರು ಜೆಎನ್.1 ಕುರಿತು ಆತಂಕಪಡುವ ಅಗತ್ಯವಿಲ್ಲ. ಇದು ಅಪಾಯಕಾರಿ ಅಲ್ಲ. ಆದರೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕಿದೆ.


ಐಸೊಲೇಷನ್ ನಲ್ಲಿರಬೇಕು.ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೆಂದು ಜನರು ಆತಂಕಪಡುವ ಅಗತ್ಯವಿಲ್ಲ, ಕಾಳಜಿ ವಹಿಸಿಕೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೋವಿಡ್ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಕೋವಿಡ್ ಸಂಪುಟ ಉಪಸಮಿತಿ ಸಭೆಯಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಿದ ನಂತರ ತಂದಿರುವ ಮಾರ್ಗಸೂಚಿಗಳೇನು ಎಂದು ವಿವರಿಸಿದರು. ಹೊಸ ವರ್ಷಕ್ಕೆ ಇಲ್ಲ ನಿರ್ಬಂಧ: ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ.

ಜನರೇ ಜನದಟ್ಟಣಿಯಲ್ಲಿ ಸೇರದಂತೆ ತಮ್ಮನ್ನು ತಾವು ಸಾಧ್ಯವಾದಷ್ಟು ನಿರ್ಬಂಧ ಹೇರಿಕೊಳ್ಳಿ. ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಿ. ಇದು ಖಾಸಗಿ ವಲಯಕ್ಕೂ ನಿಯಮ ಅನ್ವಯವಾಗುತ್ತದೆ, ಕಡ್ಡಾಯವಾಗಿ ಉದ್ಯೋಗಿಗಳಿಗೆ ಕೋವಿಡ್ ರಜೆ ನೀಡಬೇಕು ಎಂದರು. ಶಾಲೆಗೆ ಕಳುಹಿಸಬೇಡಿ:ಕೋವಿಡ್ ಲಕ್ಷಣಗಳು, ಜ್ವರ, ಕೆಮ್ಮು ಮಕ್ಕಳಲ್ಲಿ ಕಂಡುಬಂದರೆ ಶಾಲೆಗೆ ಕಳುಹಿಸದೇ ಇರುವುದು ಉತ್ತಮ, ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿರ್ಬಂಧ ಹಾಕುವುದು ಉತ್ತಮ.

ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ. ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದರು. ಜೆಎನ್.1 ಉಪತಳಿ ಹೆಚ್ಚಾಗುವ ಸಾಧ್ಯತೆ: ರಾಜ್ಯದಲ್ಲಿ ಜೆಎನ್.1 ಉಪತಳಿ ಹೆಚ್ಚಾಗುವ ಸಾಧ್ಯತೆಗಳಿವೆ. ನಿನ್ನೆಯ 60 ಸ್ಯಾಂಪಲ್ಸ್ ನಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿವೆ. ಟೆಸ್ಟ್ ಹೆಚ್ಚಿಗೆ ಮಾಡಿದಷ್ಟು ಸೈಡಿಂಗ್ ಗೊತ್ತಾಗುತ್ತೆ.ಹೀಗಾಗಿ ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.ಹಿಂದೆ ಆದ ತಪ್ಪು ಆಗಬಾರದು ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಆಶ್ಚರ್ಯ ಪಡುವ ವಿಚಾರ ಅಲ್ಲ.ಇದು ಎಕ್ಸೆಕ್ಸ್ ಮಾಡಲಾಗಿತ್ತು. Variant of interest ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ರಿಸ್ಕ್ ಫ್ಯಾಕ್ಟರಿ ಅಡ್ಡೆಸರಿ ಬಂದಿಲ್ಲ. ಇದು ಸಮಾಧಾನಕರ ವಿಚಾರ.ಆದರೂ ಎಚ್ಚರಿಕೆ ಅಗತ್ಯ ಎಂದು ಹೇಳಿದರು. ಸಿಎಂ ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ. ಐಸಿಯು ಪರಿಶೀಲನೆ ನಡೆಸಲಿದ್ದೇವೆ. ಆಕ್ಸಿಜನ್ ಸಪ್ಪೆ, ಎಲ್ ಎಂಬ ರಾಜ್ಯದಲ್ಲಿ ಸಜ್ಜುಗೊಳಿಸಲು ತಿಳಿಸಲಾಗಿದೆ.

ಆಕ್ಸಿಜನ್ ಕೊರತೆಯಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. 436 ಪಾಸಿಟಿವ್ ಪ್ರಕರಣಗಳ ಪೈಕಿ 400 ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. 7 ಜನ ಐಸಿಯುನಲ್ಲಿದ್ದಾರೆ. ಖುದ್ದು ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಟ್ರ್ಯಾಕಿಂಗ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.4 ಆಕ್ಸಿಜನ್ ಕಂಟೈನರ್ ಖರೀದಿ ಮಾಡಲಿದ್ದೇವೆ. ಆಸ್ಪತ್ರೆ ಮತ್ತು ಮನೆಯಲ್ಲಿ ಇರುವವರಿಗೆ ಈ ಆಕ್ಸಿಜನ್ ಕಂಟೈನರ್ ಉಪಯೋಗವಾಗಲಿದೆ. ಮೊದಲ ಹಾಗೂ ಎರಡನೇ ಡೋಸ್ ಪಡೆದಿದ್ದಾರೆ. ಅವರಿಗೆಲ್ಲ ಮುನ್ನೆಚ್ಚರಿಕೆಗಾಗಿ ಲಸಿಕೆ ನೀಡಲಾಗುತ್ತದೆ.

ಕೇಂದ್ರ ಸರ್ಕಾರದಿಂದ 30 ಸಾವಿರ ಮುನ್ನೆಚ್ಚರಿಕೆ ವ್ಯಾಕ್ಸಿನ್ ಕೇಳಿದ್ದು, ಉಪ ಸಮಿತಿಯಲ್ಲಿ ಖರೀದಿಗೆ ನಿರ್ಧಾರ ಮಾಡಲಾಗಿದೆ ಎಂದರು.ಕೋ ಮಾರ್ಬಿಟ್, ಹೆಲ್ತ್ ವರ್ಕಸ್ ಸೇರಿ ಹಲವರಿಗೆ ಮುನ್ನೆಚ್ಚರಿಕೆ ವ್ಯಾಕ್ಸಿನ್ ಕೊಡಲಾಗುತ್ತದೆ. ಸುವೆಜ್ ಸರ್ವಲೆನ್ಸ್ ಮೂಲಕ ಕೂಡಾ ಕೊವಿಡ್ ಟ್ಯಾಕ್ ಮಾಡಲಾಗುತ್ತದೆ. ಆರೋಗ್ಯ ಸಿಬ್ಬಂದಿಗೆ ಪ್ಯೂ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 30 ಸಾವಿರ ಕೋರ್ಬಿ ವ್ಯಾಕ್ಸ್ ಖರೀದಿಸಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement