ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಜಾತ್ರೋತ್ಸವ ಸಂಭ್ರಮ , ಪುತ್ತೂರಿಗೆ ಇಂತಹ ಶಾಸಕರು ಸಿಕ್ಕಿದ್ದು ಮಹಾಲಿಂಗೇಶ್ವರನ ಕೃಪೆ: ಸಂಜೀವ ಪೂಜಾರಿ ಕೂರೇಲು

Published

on

ಪುತ್ತೂರು: ದೇವರು ಇದ್ದಾನೋ ಇಲ್ಲವೋ ಯಾರಿಗೂ ಗೊತ್ತಿಲ್ಲ ಆದರೆ ದೇವರು ಇದ್ದಾನೆ ಎಂಬ ನಂಬಿಕೆಯ ಮೂಲಕ ನಾವು ದೇವರನ್ನು ಕಾಣುತ್ತಿದ್ದೇವೆ. ತಂದೆ ತಾಯಿಯೇ ನಮಗೆ ಕಣ್ಣಿಗೆ ಕಾಣುವ ಮೊದಲು ದೇವರು ಆಗಿದ್ದಾರೆ. ದೇವರಿಗೆ ದುಡ್ಡು ಕೊಟ್ಟ ಕೂಡಲೇ ಅನುಗ್ರಹ ಸಿಗುತ್ತದೆ ಎಂಬ ಭ್ರಮೆ ಬೇಡ, ತಂದೆ ತಾಯಿಯ ಆಶೀರ್ವಾದ ಸಿಕ್ಕಿದರೆ ಮಾತ್ರ ಗರ್ಭ ಗುಡಿಯ ದೇವರ ಆಶೀರ್ವಾದವೂ ಸಿಗಲು ಸಾಧ್ಯ ಆದ್ದರಿಂದ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ದೇವರ ಅನುಗ್ರಹ ಪಡೆಯಬಹುದು ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ದ.೩೦ ರಂದು ನಡೆದ ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವದ ಅಂಗವಾಗಿ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಧರ್ಮಚಾವಡಿ, ಸಿರಿ ದೇಯಿ ಬೈದೆತಿ ಸಿರಿದೊಂಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಮಜಾಲು ಗರಡಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ-೨೦೨೩ ಅನ್ನು ಸ್ವೀಕರಿಸಿ ಮಾತನಾಡಿದರು. ರಾಮಜಾಲು ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿರುವ ಸಂಜೀವ ಪೂಜಾರಿಯವರನ್ನು ನಾನು ಕಳೆದ ೧೦ ವರ್ಷಗಳಿಂದ ನೋಡ್ತಾ ಬಂದಿದ್ದೇನೆ. ಅವರೊಬ್ಬ ಧರ್ಮದ ಬಗ್ಗೆ ಚಿಂತನೆ ಇವರು ವ್ಯಕ್ತಿಯಾಗಿದ್ದಾರೆ.ಇಂದು ಅವರು ತನ್ನ ಅಜ್ಜನ ಹೆಸರಿನಲ್ಲಿ ನನಗೆ ಈ ಪ್ರಶಸ್ತಿಯನ್ನು ನೀಡಿದ್ದಾರೆ. ತುಂಬಾ ಸಂತೋಷವಾಗಿದೆ ಎಂದ ಅಶೋಕ್ ಕುಮಾರ್ ರೈಯವರು ನಾವು ಸಮಾಜದೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ, ನಮ್ಮಿಂದ ಈ ಸಮಾಜಕ್ಕೆ ಏನು ಸಹಾಯ ಮಾಡಬಹುದು ಎಂಬ ಧರ್ಮ ಚಿಂತನೆಯೊಂದಿಗೆ ನಮ್ಮ ಆಚಾರ ವಿಚಾರ ಸರಿ ಇದ್ದರೆ ಮಾತ್ರ ದೇವರ ಆಶೀರ್ವಾದ ಸಿಗಲು ಸಾಧ್ಯ ಆದ್ದರಿಂದ ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಹೇಳಿದರು.

ಬಡವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ:
ಧರ್ಮ ಯಾವುದೇ ಎಂದು ಕೇಳಿದರೆ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದೇ ಶ್ರೇಷ್ಠ ಧರ್ಮ, ಬಡವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮವಾಗಿದೆ ಎಂದ ಅಶೋಕ್ ಕುಮಾರ್ ರೈಯವರು, ಇಂದು ಧರ್ಮಕ್ಕೆ ರಾಜಕೀಯದ ಬಣ್ಣ ಹಚ್ಚಿ ನಿಜವಾದ ಧರ್ಮವನ್ನೇ ಮರೆ ಮಾಡುವ ಕೆಲಸ ಆಗುತ್ತಿದೆ. ಇದು ಸಲ್ಲದು ಎಂದು ಅವರು ಹೇಳಿದರು.


ಋಣ ತೀರಿಸುವ ಕೆಲಸ ಮಾಡುತ್ತೇನೆ:
ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿ ಆರಿಸಿ ಬಂದಿದ್ದರೂ ಬಡವರ ಕೆಲಸ ಮಾಡುವಲ್ಲಿ ನನಗೆ ಯಾವುದೇ ಪಕ್ಷ ಇಲ್ಲ. ಯಾವ ಪಕ್ಷದವರೂ ಕೂಡ ನನ್ನಲ್ಲಿಗೆ ಬರಬಹುದು, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವುದೇ ನನ್ನ ಗುರಿ. ಶಾಸಕನಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಏನೇ ಕೆಲಸ ಆಗಬೇಕಿದ್ದರೂ ನನ್ನ ಕಛೇರಿಗೆ ಬನ್ನಿ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.

ಪುತ್ತೂರಿಗೆ ಇಂತಹ ಶಾಸಕರು ಸಿಕ್ಕಿದ್ದು ಮಹಾಲಿಂಗೇಶ್ವರನ ಕೃಪೆ: ಸಂಜೀವ ಪೂಜಾರಿ ಕೂರೇಲು
ಸಭಾಧ್ಯಕ್ಷತೆ ವಹಿಸಿದ್ದ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಮಾತನಾಡಿ, ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿಯವರು ತನ್ನ ಅಜ್ಜ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈ ವರ್ಷ ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಇದನ್ನು ಪ್ರದಾನ ಮಾಡಿದ್ದೇವೆ. ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವವರನ್ನು ಗುರುತಿಸಿ ಈ ಪ್ರಶಸ್ತಿ ಕೊಡುತ್ತಿದ್ದೇವೆ. ಅಶೋಕ್ ಕುಮಾರ್ ರೈಯವರ ಸಮಾಜ ಸೇವೆ ಎಲ್ಲರಿಗೆ ಗೊತ್ತು. ಇಂತಹ ಒಬ್ಬ ಮಹಾನ್ ವ್ಯಕ್ತಿ ಪುತ್ತೂರಿನ ಶಾಸಕರಾಗಿ ಬಂದಿದ್ದು ಅದು ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕೃಪೆಯಿಂದ ಆಗಿದೆ . ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಅಭಿವೃದ್ಧಿ ಸಾಧನೆಗಳು ಮೂಡಿಬರಲಿ ಅವರಿಗೆ ಕೋಟಿ ಚೆನ್ನಯರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು

Continue Reading
Click to comment

Leave a Reply

Your email address will not be published. Required fields are marked *

Advertisement