Published
12 months agoon
By
Akkare Newsಪುತ್ತೂರು:ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸಮೀಪದ ಸೇಡಿಯಾಪು ಎಂಬಲ್ಲಿ 11 ಕೆ.ವಿ. ವಿದ್ಯುತ್ ಕಂಬಕ್ಕೆ ತಡರಾತ್ರಿ ತೆಂಗಿನ ಮರ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾದ ಘಟನೆ ನಡೆದಿದೆ.
ಪುತ್ತೂರುನಿಂದ ಉಪ್ಪಿನಂಗಡಿಗೆ ಸರಬರಾಜು ಆಗುತ್ತಿರುವ 11 ಕೆ.ವಿ. ವಿದ್ಯುತ್ ಕಂಬದ ಮೇಲೆ ರಾತ್ರಿ 11 ಗಂಟೆ ವೇಳೆಗೆ ಸೇಡಿಯಾಪು ಜಂಕ್ಷನ್ ಬಳಿ ತೆಂಗಿನ ಮರ ಬಿದ್ದು ವಿದ್ಯುತ್ ಸರಬರಾಜಿಗೆ ತೊಂದರೆಯಾಗಿತ್ತು.
ಸ್ಥಳಕ್ಕೆ ಕೂಡಲೇ ಆಗಮಿಸಿದ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಸದಸ್ಯರು, ಮೆಸ್ಕಾಂ ಇಲಾಖೆಯವರು ಮತ್ತು ಮಹಾಸತಿ ಎಲೆಕ್ಟ್ರಿಕಲ್ ಸಿಬ್ಬಂದಿಗಳು ದುರಸ್ತಿಗೆ ಸಹಕರಿಸಿದರು.
ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಮಡಿವಾಳ, ಚಂದ್ರಶೇಖರ್ ಕುಲಾಲ್, ತಿಲಕ್ ಮಡಿವಾಳ, ರಾಘವೇಂದ್ರ ಆಚಾರ್ಯ, ಕೃಷ್ಣ ಕುಲಾಲ್, ಪ್ರವೀಣ್ ಮಣಿಯಾಣಿ, ಸಂತೋಷ, ಮೆಸ್ಕಾಂ ಅಧಿಕಾರಿಗಳಾದ ಹೇಮಚಂದ್ರ ಗೌಡ , ನವಾಜ್, ಸಂತೋಷ, ಮಲ್ಲು, ಮಹಾಸತಿ ಎಲೆಕ್ಟ್ರಿಕಲ್ ಸಿಬಂದಿಗಳಾದ ಮಣಿಕಂಠ, ಸತೀಶ್ ಮಡಿವಾಳ, ಚಿಂತನ್ ಮತ್ತಿತರರು ಸಹಕರಿಸಿದರು.