ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಚೂರಿಪದವು: ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನೆ ಸಮಸ್ಯೆಗಳನ್ನು‌ಮೆಟ್ಟಿ‌ನಿಲ್ಲುವ ಸಾಮರ್ಥ್ಯ ಇರುವುದು ಸರಕಾರಿ ಶಾಲೆಯಲ್ಲಿ ಕಲಿತವರಿಗೆ ಮಾತ್ರ: ಅಶೋಕ್ ರೈ

Published

on

ಪುತ್ತೂರು: ಸರಕಾರಿ ಶಾಲೆಗಳು ಎಲ್ಲವನ್ನೂ ಕಲಿಸುತ್ತದೆ, ಗುಣಮಟ್ಟದ ಶಿಕ್ಷಣವೂ ಇದೆ ಜೊತೆಗೆ ಏನೇ ಸಂಕಷ್ಟ ಬಂದರೂ ಬದುಕುವ ಧೈರ್ಯವನ್ನು ಸರಕಾರಿ‌ಶಾಲಾ ಶಿಕ್ಷಣ ನೀಡುತ್ತದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಸರಕಾರಿ‌ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ದ ಕೊರತೆ ಇದೆ ಅದನ್ನು ಮುಂದಿನ ದಿನಗಳಲ್ಲಿ ಕೊರತೆ ನೀಗಿಸುವ ಕೆಲಸ ನಡೆಯಲಿದೆ.
ಗುಣಮಟ್ಟದ ಶಿಕ್ಷಣಕ್ಕಾಗಿಯೇ ಶಿಕ್ಷಕರನ್ನು ಸರಕಾರ ನೇಮಿಸಿದೆ.‌ಮುಂದೆ ಎರಡು ಗ್ರಾಮಕ್ಕೊಂದು ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗುವುದು.ಸರಕಾರಿ ಶಾಲೆಗೆ ಪೋಷಕರು ಮಕ್ಕಳನ್ನು ದಣಾಖಲಿಸುವಷ್ಡು ಮಟ್ಟಕ್ಕೆ ಸರಕಾರಿ ಶಾಲೆಗಳು ಅಭಿವೃದ್ದಿಯಾಗಲಿದೆ ಎಂದು ಹೇಳಿದರು.


ಮಕ್ಕಳೇ ಹೆತ್ತವರನ್ನು ಆಶ್ರಮಕ್ಕೆ ಸೇರಿಸಬೇಡಿ
ನಿಮ್ಮನ್ನು ಹೆತ್ತು ಹೊತ್ತು,ಕಷ್ಟಪಟ್ಟು ಸಾಕಿದ ಹೆತ್ತವರನ್ನು ಅವರ ಮುದಿ ಪ್ರಾಯದಲ್ಲಿ‌ಆಶ್ರಮಕ್ಕೆ ಸೇರಿಸಬೇಡಿ.‌10 ಮಕ್ಕಳಿದ್ದರೂ ಹೆತ್ತವರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ಹೆತ್ತವರನ್ನು ನೋಡಿಕೊಳ್ಳಲು ಹತ್ತು‌ಮಕ್ಕಳಿಗೆ ಸಾಧ್ಯವಾಗದೇ ಇರುವುದು ಸಂಸ್ಕಾರದ ಕೊರತೆಯಿಂದಾಗಿದೆ. ಕುಟುಂಬ ಸಂಬಂಧಗಳ ಬಗ್ಗೆ ಮಕ್ಕಳಿಗೆ ಕಲಿಸಬೇಕು. ಶಾಲೆಯಲ್ಲಿ ಮಾತ್ರ ಮಕ್ಕಳಿಗೆ ಶಿಕ್ಷಣ ದೊರೆತರೆ ಸಾಲದು ಮನೆಯಲ್ಲೂ ಶಿಕ್ಷಣ ನೀಡುವಂತಾಗಬೇಕು ಎಂದು ಹೇಳಿದರು.


ಗೃಹಲಕ್ಷ್ಮಿ ಬಾರದವರು ಕೈ ಎತ್ತಿ….
ಶಾಸಕರು ಭಾಗವಹಿಸುವ ಪ್ರತೀಯೊಂದು ಸಭೆಯಲ್ಲೂ ಸರಕಾರದ ಗ್ಯಾರಂಟಿ ಯೋಜನೆ ಬಗ್ಗೆ ಮಾಹಿತಿ ನೀಡುವ ಶಾಸಕರು ಸರಕಾರದ ಗ್ಯಾರಂಟಿ ಯೋಜನೆ ಎಲ್ಲರಿಗೂ ದೊರೆಯಬೇಕು ,ಹಣ ಖಾತೆಗೆ ಬಾರದೆ ಇದ್ದಲ್ಲಿ ಕೈ ಎತ್ತಿ ಎಂದು ಹೇಳುವ ಶಾಸಕರು ಹಣ ಬಾರದ ಫಲಾನುಭವಿಗಳ ಮಾಹಿತಿಯನ್ನು ಸಭೆಯಲ್ಲೇ ಪಡೆದು ಅವರಿಗೆ ಹಣ ಬರುವಂತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಶಾಸಕರು ಸಭೆಗೆ ತಿಳಿಸಿದರು.‌

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಶಾಲೆಯ ಸ್ಥಾಪಕ ತಿಮ್ಮಣ್ಣ ರೈ ಆನಾಜೆ,ಧೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಗ್ರಾಪಂ ಸದಸ್ಯರಾದ ಗ್ರೆಟ್ಟಾ ಜೆನೆಟಾ ಡಿಸೋಜಾ, ಅವಿನಾಶ್ ರೈ, ಬಾಲಚಂದ್ರ ಕೆ, ಗ್ರಾಪಂ ಮಾಜಿ ಸದಸ್ಯ ಬಾಲಚಂದ್ರ ರೈ ಆನಾಜೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಮಾ ಶಶಿಪೂಜಾರಿ, ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ರೈ ಉಪಸ್ಥಿತರಿದ್ದರು.
ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement