ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಪ್ರವಾಸಿಗರಿಗೆ ಶುಭ ಸುದ್ದಿ ಲಕ್ಷ ದೀಪಕ್ಕೆ ಹೋಗಲು ರೆಡಿಯಾಗಿ ಇಲ್ಲಿದೆ ಫುಲ್ ಡೀಟೇಲ್ಸ್ ..!?

Published

on

ಪ್ರವಾಸಿಗರೇ ಗಮನಿಸಿ, ಲಕ್ಷದ್ವೀಪಕ್ಕೆ ಹೋಗುವ ಪ್ಲಾನ್ ನಲ್ಲಿದ್ದಿರಾ?? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ ನೋಡಿ!!ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಆರಂಭ ಮಾಡಲು ಮುಂದಾಗಿದೆ.ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಲಕ್ಷದ್ವೀಪದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಹಲವು ಮಂದಿ ಲಕ್ಷದ್ವೀಪಕ್ಕೆ ಹಾರಲು ಅಣಿಯಾಗುತ್ತಿದ್ದಾರೆ. ಲಕ್ಷದ್ವೀಪ ಮಂಗಳೂರಿನಿಂದ 356 ಕಿಮೀ ದೂರದಲ್ಲಿದ್ದು, ಕೊಚ್ಚಿಯಿಂದ 391 ಕಿಮೀ ದೂರದಲ್ಲಿದೆ. ಲಕ್ಷದ್ವೀಪಕ್ಕೆ ತರಕಾರಿ ಆಹಾರ ಸಾಮಾಗ್ರಿಯಿಂದ ಹಿಡಿದು ಕಟ್ಟಡ ಸಾಮಾಗ್ರಿವರೆಗೂ ಮಂಗಳೂರಿನಿಂದ ಸಾಗಾಟ ನಡೆಯುತ್ತದೆ.


ಮಂಗಳೂರಿನಿಂದ ಪ್ರತಿದಿನ ಲಕ್ಷದ್ವೀಪಕ್ಕೆ ಐವತ್ತಕ್ಕೂ ಹೆಚ್ಚು ವೆಸೆಲ್ಗಳು ತೆರಳುತ್ತವಂತೆ. ಲಕ್ಷದ್ವೀಪದಲ್ಲಿರುವ 36 ಐಲ್ಯಾಂಡ್ಗಳಲ್ಲಿ ಕೇವಲ ಆರು ಐಲ್ಯಾಂಡ್ಗಳಲ್ಲಿ ಮಾತ್ರ ಜನವಸತಿ ಯಿದ್ದು, ಇನ್ನೂ ಮೂರು ಐಲ್ಯಾಂಡ್ಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಕೋವಿಡ್ ಬರುವ ಮೊದಲು ಲಕ್ಷದ್ವೀಪಕ್ಕೆ ಪ್ರವಾಸಿ ಹಡಗಿದ್ದು, ಆರು ಸಾವಿರಕ್ಕೆ ಊಟ ವಸತಿ ಸೇರಿದಂತೆ ಮೂರು ದಿನದ ಪ್ಯಾಕೇಜ್ ಹೊಂದಿತ್ತು. ಆದರೆ ಕೋವಿಡ್ ಬಳಿಕ ಲಕ್ಷದ್ವೀಪದ ಪ್ರವಾಸಿ ಹಡಗು ಸಂಚಾರ ನಿಲುಗಡೆಯಾಗಿದೆ. ಲಕ್ಷದ್ವೀಪ ಪ್ರವಾಸಕ್ಕೆ ಕಠಿಣ ನಿಯಮಗಳನ್ನು ಹೊಂದಿವೆ. ಲಕ್ಷದ್ವೀಪ ಅಭಿವೃದ್ಧಿಯಾದಲ್ಲಿ ಮಂಗಳೂರಿನ ಪ್ರವಾಸೋದ್ಯಮಕ್ಕೂ ಬೂಸ್ಟ್ ದೊರೆಯಲಿದೆ. ಪರ್ಮಿಟ್ ಪಡೆಯಲು ಹತ್ತಾರು ನಿಬಂಧನೆಗಳಿದ್ದು, ಪ್ರವಾಸಕ್ಕೆ 20 ದಿನದ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Advertisement