ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಫಿಲೋಮಿನಾ ಕಾಲೇಜ್ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಂದ ಶಾಂತಿನಗರ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ.

Published

on

ಕೋಡಿಂಬಾಡಿ: ಜ 13, ಸ್ನಾತಕೋತ್ತರ ಸಂಶೋಧನಾ ಕೇಂದ್ರ ಸಂತ ಫಿಲೋಮಿನ ಕಾಲೇಜ್ ಪುತ್ತೂರು ಮತ್ತು ಸರ್ಕಾರಿ ಪ್ರೌಢಶಾಲಾ ಶಾಂತಿನಗರ ಕೋಡಿಂಬಾಡಿ ಇದರ ಜಂಟಿ ಆಶ್ರಯದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಎಂಬ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆ ಶಾಂತಿನಗರ ಇಲ್ಲಿ ಆಯೋಜಿಸಲಾಗಿತ್ತು .ಇದರ ಅಧ್ಯಕ್ಷತೆಯನ್ನು *ಶ್ರೀಮತಿ ಜಯಂತಿ*, ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ, ಶಾಂತಿನಗರ, ಉದ್ಘಾಟನೆಯನ್ನು *ಶ್ರೀ ಜಯಪ್ರಕಾಶ್ ಬದಿನಾರ್ ಉಪಾಧ್ಯಕ್ಷರು, ಕೋಡಿಂಬಾಡಿಗ್ರಾಮ ಪಂಚಾಯತು.

ಸಂಪನ್ಮೂಲ ವ್ಯಕ್ತಿಗಳಾಗಿ *ಶ್ರೀಮತಿ ಶ್ರೀಮಣಿ*, ಉಪನ್ಯಾಸಕರು ಸ್ನಾತಕೋತರ ಸಮಾಜ ಕಾರ್ಯ ವಿಭಾಗ ಸಂತ ಫಿಲೋಮಿನ ಕಾಲೇಜು, ಪುತ್ತೂರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ *ರಾಮಣ್ಣ ಗೌಡ* ಇವರು ಭಾಗವಹಿಸಿದರು. ಮಕ್ಕಳಿಗೆ ಹಿತನುಡಿಯನ್ನು ನುಡಿದರು. ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ಜಯಶ್ರೀ ಸ್ವಾಗತಿಸಿ ನಕುಲ್ ಪ್ರಧಾನ್ ಧನ್ಯವಾದ ಮಾಡಿದರು,ವಿನುತ ಬಿ ನಿರೂಪಣೆ ಮಾಡಿದರು. ಮನೋಜ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement