ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ದ.ಕ. ಜಿಲ್ಲೆಯ ಗುರುವಾಯನಕೆರೆಯ ಯೋಧ ಏಕನಾಥ ಶೆಟ್ಟಿ, ನಾಪತ್ತೆಯಾಗಿದ್ದ ಯುದ್ಧ ವಿಮಾನದ ಅವಶೇಷ ಪತ್ತೆ ಎಂಟು ವರ್ಷಗಳ ಬಳಿಕ ಪತ್ತೆಯಾದ ಎಂಇ 32 ವಿಮಾನ

Published

on

ನವದೆಹಲಿ : 8 ವರ್ಷಗಳ ಹಿಂದೆ 29 ಸಿಬ್ಬಂದಿಗಳನ್ನು ಹೊತ್ತುಕೊಂಡು ಹೋಗಿದ್ದ AN-32 ವಿಮಾನ ನಾಪತ್ತೆಯಾಗಿತ್ತು. ಕೊನೆಗೂ ಭಾರತೀಯ ವಾಯುಸೇನೆಯ ಟ್ರಾನ್ಸ್‌ಪೋರ್ಟ್‌ ವಿಮಾನದ ಅವಶೇಷಗಳು ಪತ್ತೆಯಾಗಿದೆ.2016ರ ಜುಲೈ 22ರ ಬೆಳಗ್ಗೆ AN-32 ವಿಮಾನ ಚೆನ್ನೈನಿಂದ ಪೋರ್ಟ್ ಬ್ಲೇರ್​ಗೆ ಹೊರಟಿತ್ತು. ಈ ಇಂಡಿಯನ್ ಏರ್ ಪೋರ್ಸ್ ವಿಮಾನದಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. AN-32 ವಿಮಾನ ಹಾರಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಗ್ರೌಂಡ್‌ ಸ್ಟೇಷನ್‌ನೊಂದಿಗೆ ತನ್ನೆಲ್ಲಾ ಸಂಪರ್ಕವನ್ನು ಕಳೆದುಕೊಂಡಿತ್ತು.

ಬಂಗಾಳಕೊಲ್ಲಿಯಲ್ಲಿ ವಿಮಾನ ಹಾರಾಟದ ವೇಳೆ ರಾಡಾರ್‌ನ ಸಂಪರ್ಕಕ್ಕೂ ಇದು ಸಿಕ್ಕಿರಲಿಲ್ಲ. ಭಾರತೀಯ ಸರ್ಕಾರದ ಸಂಬಂಧಿತ ಇಲಾಖೆ ದೊಡ್ಡ ಪ್ರಮಾಣದ ಶೋಧ ಕಾರ್ಯ ನಡೆಸಿದರೂ ಈ ವಿಮಾನದ ಸಣ್ಣ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ.ಸಮುದ್ರದಲ್ಲಿ ಕಾಣೆಯಾದ ವಿಮಾನಕ್ಕಾಗಿ ಭಾರತ ಈವರೆಗೂ ನಡೆಸಿರುವ ಅತಿದೊಡ್ಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇದಾಗಿತ್ತು.


ಇದೇ ವೇಳೆ AN-32 ವಿಮಾನ ಬಂಗಾಳ ಕೊಲ್ಲಿಯಲ್ಲಿ AN-32 ಪತನವಾಗಿತ್ತು. ಕಳೆದ 8 ವರ್ಷಗಳಿಂದ ಈ ವಿಮಾನದ ಅವಶೇಷಗಳ ಪತ್ತೆ ಸಾಧ್ಯವಾಗಿರಲಿಲ್ಲ. ವಿಮಾನದಲ್ಲಿದ್ದ 29 ಮಂದಿ ಮೃತಪಟ್ಟಿದ್ದಾರೆ ಎಂದು ಧೃಡೀಕರಿಸಲಾಗಿತ್ತು.ಇದೀಗ ಚೆನ್ನೈ ಕಡಲತೀರದಿಂದ 310 ಕಿಲೋಮೀಟರ್‌ ದೂರದಲ್ಲಿ 3.4 ಕಿಲೋಮೀಟರ್‌ ಆಳದಲ್ಲಿ ಈ ವಿಮಾನದ ಅವಶೇಷಗಳು ಪತ್ತೆಯಾಗಿದೆ ಎಂದು ಇಂಡಿಯನ್ ಏರ್ ಪೋರ್ಸ್​ನಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement