Published
11 months agoon
By
Akkare Newsಪುತ್ತೂರು: ಪುತ್ತೂರು- ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ರೈಲು ನಿಲ್ದಾಣ ಬಳಿಯ ಮರೀಲು ರೈಲ್ವೆ ಸೇತುವೆಯಲ್ಲಿ ತ್ಯಾಜ್ಯ ರಸ್ತೆಯ ಮೇಲೆ ಬೀಳದಿರಲು ಅಳವಡಿಸಿದ ಕಬ್ಬಿಣದ ಶೀಟ್ ಗಳು ತುಕ್ಕು ಹಿಡಿದು ವಾಹನ ಸವಾರರ ಮತ್ತು ಪಾದಚಾರಿಗಳ ಮೇಲೆ ಬೀಳುವಂತ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ತುರ್ತು ಬದಲಾವಣೆಗೆ ನೈರುತ್ಯ ರೈಲ್ವೆ ಗಮನಕ್ಕೆ ತರಲಾಗಿದ್ದು ಸಂಸದರ ಜಾಲತಾಣದಲ್ಲಿಯೂ ದಾಖಲಿಸಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ದಿನೇಶ್ ಭಟ್ ಕೆ. ತಿಳಿಸಿದ್ದಾರೆ.