ಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಾಮಾನ್ಯ ಸ್ಥಳೀಯ
ಸರ್ವೆಯ 30 ವರ್ಷಗಳಿಂದ ವಿವಾದದಲಿದ್ದ ರಸ್ತೆಗೆ ಮುಕ್ತಿ ನೀಡಿದ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳುಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಶಾಸಕ ಅಶೋಕ್ ಕುಮಾರ್ ರೈ ಯವರ ಸೂಚನೆಗೆ ಸ್ಪಂದಿಸಿದ : ದ. ಕ.ಜಿಲ್ಲಾಧಿಕಾರಿ ರೈತರ ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಲು ಪಡೆಯಲು ಆದೇಶ, ರೈತರ ಮುಖದಲ್ಲಿ ಮಂದಹಾಸಅಭಿನಂದನೆ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯದ ಸಹ ಅಧ್ಯಕ್ಷರಾಗಿ ಶಕುಂತಳಾ ಶೆಟ್ಟಿ, ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ ನೇಮಕಅಭಿನಂದನೆ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರೆ ಯಾಗಿ ಶೈಲಜಾ ಅಮರನಾಥ್ ಪುತ್ತೂರು ನೇಮಕಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮುಂಬೈ ಬಂಟರ ಸಂಘದಲ್ಲಿ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಗೌರವಅಭಿನಂದನೆ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರು ನಗರ ಕಾಂಗ್ರೆಸ್ ವ್ಯಾಪ್ತಿಯ ಉಸ್ತುವಾರಿಗಳಾಗಿ ರೋಶನ್ ರೈ ಬನ್ನೂರು ಮಹಮ್ಮದ್ ರಿಯಾಝ್ ಪರ್ಲಡ್ಕ. ರಂಜಿತ್ ಬಂಗೇರಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿಯಿಂದ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಇವರಿಗೆ ಅಭಿನಂದನೆPublished
11 months agoon
By
Akkare Newsಪುತ್ತೂರು: ಬಿಜೆಪಿಯೊಳಗೆ ಎದ್ದಿದ್ದ ದೊಡ್ಡ ಗೊಂದಲಕ್ಕೆ ತೆರೆ ಬೀಳುವ ಲಕ್ಷಣಗಳು ಗೋಚರವಾಗುತ್ತಿವೆ. ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಹಾಗೂ ಬಿಜೆಪಿ ಮುಖಂಡರ ನಡುವೆ ಮಾತುಕತೆಗಳು ನಡೆಯುತ್ತಿವೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯದ ಗಮನ ಸೆಳೆದಿದ್ದ ಪುತ್ತಿಲ ಪರಿವಾರ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಆಖಾಡಕ್ಕೆ ಧುಮುಕ್ಕಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಎಲ್ಲರೂ ಒಮ್ಮೆ ಹಿಂದಿರುಗಿ ನೋಡುವಂತೆ ಮಾಡಿದ್ದರು. ಸಣ್ಣ ಅಂತರದಲ್ಲಿ ಜಯಮಾಲೆ ತಪ್ಪಿದರೂ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಂತರದ ದಿನಗಳಲ್ಲಿ ಪುತ್ತಿಲ ಪರಿವಾರ ಹುಟ್ಟಿಕೊಂಡು, ಸಾಕಷ್ಟು ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿತ್ತು. ಇದೀಗ ಪುತ್ತಿಲ ಪರಿವಾರ ಹಾಗೂ ಬಿಜೆಪಿ ನಡುವೆ ಮಾತುಕತೆ ನಡೆಯುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ.
ಮಂಡಲ-ಗ್ರಾಮಾಂತರ ಬಿಜೆಪಿ ಅಧ್ಯಕ್ಷತೆಯ ಹುದ್ದೆಯನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡುವ ಮಾತುಕತೆ ನಡೆಯುತ್ತಿದೆ ಎನ್ನುವುದೇ ಈಗಿನ ಬಿಸಿಬಿಸಿ ಸುದ್ದಿ. ಆದರೆ ಈ ಬಗ್ಗೆ ಎರಡೂ ಕಡೆಯ ವಲಯಗಳಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಬಲ್ಲವರ ಪ್ರಕಾರ, ಮಾತುಕತೆ ನಡೆಯುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು.ಬಿಜೆಪಿ ಹಾಗೂ ಪುತ್ತಿಲ ಪರಿವಾರದ ನಡುವೆ ಮಾತುಕತೆಗಳು ನಡೆದು, ಒಂದು ಒಪ್ಪಂದಕ್ಕೆ ಬಂದದ್ದೇ ಆದರೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಬಿಜೆಪಿಯಲ್ಲಿ ಮಹತ್ವದ ಸ್ಥಾನ ನೀಡುವುದು ಖಚಿತ. ಹೀಗಾದಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಪ್ರಮುಖರಿಗಾಗಿ ಯಾವ ಬೇಡಿಕೆ ಮುಂದಿಡಬಹುದು ಎನ್ನುವ ಕುತೂಹಲವೂ ಇದೆ.
ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡುವುದಾದರೆ, ಪುತ್ತಿಲ ಪರಿವಾರವನ್ನು ಅಥವಾ ಅರುಣ್ ಕುಮಾರ್ ಪುತ್ತಿಲ ಅವರನ್ನು ಸಮಾಧಾನಿಸುವುದು ಬಿಜೆಪಿಗೆ ಅನಿವಾರ್ಯ ಹಾಗೆಂದು, ಈ ಹಿಂದೆ ಹಲವಾರು ಬಾರಿ ನಿರಾಶರಾಗಿರುವ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯಿಂದ ಅಂತರವನ್ನು ಕಾವಾಡಿಕೊಂಡಿದ್ದಾರೆ. ಆದ್ದರಿಂದ ಒಮ್ಮೆಗೇ ಬಿಜೆಪಿ ಮುಂದಿಡುವ ಷರತ್ತುಗಳನ್ನು ಒಪ್ಪಿಕೊಳ್ಳುತ್ತಾರೆಯೋ ಎನ್ನುವುದೇ ದೊಡ್ಡ ಪ್ರಶ್ನೆ.ಕಾರ್ಯಕರ್ತರೇ ಬೆಂಗಾವಲಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಮುಂದಿನ ಯಾವುದೇ ನಡೆಯನ್ನು ಎತ್ತಿಡಬೇಕಾದರೂ, ಕಾರ್ಯಕರ್ತರ ಅಭಿಪ್ರಾಯ ಪಡೆದೇ ತೀರಬೇಕು. ಆದ್ದರಿಂದಲೇ ಆರುಣ್ ಕುಮಾರ್ ಪುತ್ತಿಲ ಅವರ ನಡೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಅಂದುಕೊಂಡಂತೆ, ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದರೆ ಬಿಜೆಪಿಯ ಗತಿ ಹೇಗಿರಬಹುದು? ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಗಟ್ಟಿ ತಳಹದಿ ಹಾಕಿಕೊಂಡಿರುವ ಪುತ್ತಿಲ ಪರಿವಾರ ಮುಂದೆ ಹೇಗೆ ಮುಂದುವರಿಯಬಹುದು? ಹೀಗೆ ಅನೇಕ ಪ್ರಶ್ನೆಗಳು ಸಹಜವಾಗಿ ಮೇಲೆದ್ದಿದೆ. ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಮುಂದಡಿ ಇಡುವುದು ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಪ್ರಮುಖರ ಮುಂದಿರುವ ದೊಡ್ಡ ಸವಾಲು ಹೌದು.