ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

(ಜ.24 )ಕಲ್ಲೇಗ ಜಾತ್ರೆ ಹಿನ್ನೆಲೆ ಮಾರ್ಗ ಬದಲಾವಣೆ ಸಂಜೆ 7:45 ರಿಂದ ರಾತ್ರಿ 9:15 ರವರೆಗೆ ಮುಖ್ಯ ರಸ್ತೆಯಲ್ಲಿ ಸಂಚಾರ ಬದಲಾವಣೆ

Published

on

ಪುತ್ತೂರು : ಕಲ್ಲೇಗ ಕಲ್ಕುಡ ದೇವಸ್ಥಾನದ ಕಲ್ಕುಡ-ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ಹಿನ್ನೆಲೆ ಜ.24 ರಂದು ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.





ಜ.24 ರಂದು ಕಬಕ ಗ್ರಾಮದ ಕಲ್ಲೇಗ ಶ್ರೀ ಕಲ್ಕುಡ ದೇವಸ್ಥಾನದ ಕಲ್ಕುಡ-ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದ್ದು, ಸದ್ರಿ ಜಾತ್ರೆಯಲ್ಲಿ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು ಕಲ್ಲೇಗ ದೇವಸ್ಥಾನ ತಲುಪುವ ಅಂದಾಜು ಸಮಯ 07-45 ರಿಂದ 9-15 ಗಂಟೆ ವರೆಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುಗಮಕ್ಕೆ ಮಾರ್ಗ ಬದಲಾವಣೆ ಇದ್ದು ವಾಹನ ಚಾಲಕರು ಈ ಕೆಳಗಿನಂತೆ ಸೂಚನೆಗಳನ್ನು ಪಾಲಿಸಬೇಕಾಗಿ ವಿನಂತಿಸಲಾಗಿದೆ.

ಸೂಚನೆಗಳು:
.ಪುತ್ತೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಮಂಜಲ್ಪಡ್ಪು ಕೊಡಿಪ್ಪಾಡಿ ಕಬಕ ಮೂಲಕ ಮಂಗಳೂರಿಗೆ ತೆರಳುವುದು.
.ಮಂಗಳೂರಿನಿಂದ ಪುತ್ತೂರು, ಮೈಸೂರು ಕಡೆಗೆ ತೆರಳುವ ವಾಹನಗಳು ಮುರ, ಮುರ ರೈಲ್ವೆ ಬ್ರಿಡ್ಜ್ ಮೂಲಕ ಬನ್ನೂರು ಪಡೀಲ್ ಮೂಲಕ ಪುತ್ತೂರಿಗೆ ತೆರಳಬೇಕು.
.ಕಲ್ಲೇಗ ಜಾತ್ರೆಗೆ ಬರುವವರು ವಿವೇಕಾನಂದ ಕಾಲೇಜ್ ಹಾಗೂ ಪಾರ್ಕಿಂಗ್ ಯೋಗ್ಯ ಸ್ಥಳದಲ್ಲಿ ಪಾರ್ಕ್ ಮಾಡತಕ್ಕದ್ದು ರಸ್ತೆಯಲ್ಲಿ ನಿಲ್ಲಿಸಿ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತೊಡಕು ಉಂಟು ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement