Published
1 year agoon
By
Akkare Newsಬಿಯರ್ ಕುಡಿಯುವವರಿಗೆ ಒಂದು ಆಘಾತಕಾರಿ ಸುದ್ದಿಯಿದೆ. ಶೀಘ್ರದಲ್ಲೇ ಬಿಯರ್ ದುಬಾರಿಯಾಗಲಿದೆ. ಕರ್ನಾಟಕ ಸರಕಾರವು ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ಪ್ರಸ್ತಾವನೆಯ ಕುರಿತು ಚಿಂತನೆ ನಡೆಸಿದೆ.ಇದರ ಪರಿಣಾಮ 650 ಎಂಎಲ್ ಬಿಯರ್ ಬಾಟಲಿ ದರ 8 ರೂಪಾಯಿಯಿಂದ 10 ರೂಪಾಯಿ ಹೆಚ್ಚಳವಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಾಟಲಿಯ ಬಿಯರ್‌ನ ಮೇಲೆ ಅಬಕಾರಿ ಸುಂಕವನ್ನು ಶೇ.10 ರಷ್ಟು ಹೆಚ್ಚಳ ಮಾಡಲಾಗುತ್ತದೆ. ಅಂದರೆ ಅಬಕಾರಿ ಸುಂಕ ಶೇ.185 ರಿಂದ ಶೇ.195 ಕ್ಕೆ ಏರಿಕೆಯಾಗಲಿದೆ. ಇದೇ ತಿಂಗಳು ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಬಿಯರ್ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆ ಆಗುತ್ತಿರುವ ಕಾರಣ ಸರಕಾರ ಹೆಚ್ಚುವರಿ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸಿದೆ.