ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಪುಣೆ: ಜನವರಿ : 29: ಲಾಡ್ಜ್ ನಲ್ಲಿ ಟೆಕ್ಕಿ ಯುವತಿಯನ್ನು ಆಕೆಯ ಪ್ರಿಯಕರ ಗುಂಡಿಕ್ಕಿ ಕೊಲೆ

Published

on

ಪುಣೆ: ಜನವರಿ : 29: ಲಾಡ್ಜ್ ನಲ್ಲಿ ಟೆಕ್ಕಿ ಯುವತಿಯನ್ನು ಆಕೆಯ ಪ್ರಿಯಕರ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಪಿಂಪ್ರಿ ಚಿಂಚ್ವಾಡ್ನ ಹಿಂಜಾವಾಡಿ ಪ್ರದೇಶದ ಓಯೋ ಟೌನ್ ಹೌಸ್ ಹೋಟೆಲ್ನಲ್ಲಿ ನಡೆದಿದೆ.ಆರೋಪಿಯನ್ನು ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

ವಂದನಾ ದ್ವಿವೇದಿ ಎಂಬ ಮಹಿಳೆ ಹಿಂಜಾವಾಡಿಯ ಪ್ರತಿಷ್ಠಿತ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ರಿಷಬ್ ನಿಗಮ್ ಉತ್ತರ ಪ್ರದೇಶದ ಲಕ್ನೋ ನಿವಾಸಿ ಎಂದು ತಿಳಿದು ಬಂದಿದೆ.





ಕಳೆದ ಹತ್ತು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು . ವಂದನಾಳನ್ನು ಭೇಟಿಯಾಗಲು ರಿಷಭ್ ಪುಣೆಗೆ ಬಂದಿದ್ದು, ಇಬ್ಬರೂ ಜನವರಿ 25ರಿಂದ ತಂಗಿದ್ದ ಹಿಂಜಾವಾಡಿಯಲ್ಲಿ ಹೋಟೆಲ್ ಬುಕ್ ಮಾಡಿದ್ದರು.

ವಂದನಾಳ ಬಗ್ಗೆ ಅನುಮಾನವಿದ್ದ ಕಾರಣ ರಿಷಬ್ ಅವರನ್ನು ಕೊಲ್ಲುವ ಸಂಚು ಮಾಡಿ ಪುಣೆಗೆ ಬಂದಿದ್ದರು. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ರಿಷಬ್ ವಂದನಾಗೆ ಗುಂಡು ಹಾರಿಸಿದ ಬಳಿಕ ಹೊಟೇಲ್ ಕೊಠಡಿಯಿಂದ ಹೊರಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಪೊಲೀಸರು ಆರೋಪಿ ರಿಷಬ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement