ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಭಕ್ತಕೋಡಿ ಹಿ.ಪ್ರಾ.ಶಾಲಾ ನೂತನ ಕಟ್ಟಡ ಉದ್ಘಾಟನೆ, ಸರಕಾರಿ ಶಾಲೆಗಳು‌ ಮೊದಲಿನ ಹಾಗಿಲ್ಲ ಸಂಪೂರ್ಣ ಬದಲಾಗಿದೆ: ಅಶೋಕ್ ರೈ

Published

on

ಪುತ್ತೂರು: ಸರಕಾರಿ‌ಶಾಲೆಗಳಲ್ಲಿ ಸೌಕರ್ಯದ ಕೊರತೆ ಇದೆ, ಶಿಕ್ಷಕರ ಕೊರತೆ ಇದೆ ಎಂಬ ನೆಪ ಹೇಳಿ ಅನೇಕ ಪೋಷಕರುಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದರು ಆದತೆ ಇಂದು ಸರಕಾರಿ ಶಾಲಾ ಶಿಕ್ಷಣ ಮತ್ತು ಇತರೆ ಸೌಲಭ್ಯಗಳಲ್ಲಿ ತುಂಬಾ ಮಾರ್ಪಾಟು ಆಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಭಕ್ತಕೋಡಿ ಸರಕಾರಿ ಹಿ ಪ್ರಾ ಶಾಲಾ ನೂತನ ಕೊಠಡಿ ಉದ್ಘಾಟಿಸಿ‌ಮಾತನಾಡಿದರು.



ಬಡವರ ಮಕ್ಕಳೆ ಹೆಚ್ಚಾಗಿ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ,ಬಡವರ‌ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊತೆಯಬೇಕು‌ಎಂಬ ಉದ್ದೇಶದಿಂದ ಸರಕಾರ ಭಾಷಾವಾರು ಶಿಕ್ಷಕರ ನೇಮಕವನ್ನು ಮಾಡಿದೆ ಇದರಿಂದ ಗುಣಮಟ್ಟದ ಶಿಕ್ಷಣ ದೊರೆಯಲು‌ಸಾಧ್ಯವಾಗುತ್ತದೆ ಎಂದು ಹೇಳಿದರು.ಮಗುವನ್ನು ಶಾಲೆಗೆ ಕಳಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ಮೇಲೆ ಪೋಷಕರ ನಿಗಾ ಅತೀ ಅಗತ್ಯವಾಗಿದೆ. ಕಲಿಯುವ ಉತ್ಸಾಹ ಇದ್ದರೆ ಕಲಿಕೆಗೆ ಸರಕಾರವೇ ನೆರವು ನೀಡುತ್ತದೆ. ಶ್ರೀಮಂತರ ಮಕ್ಕಳು ಮಾತ್ರ ಉನ್ನತ ವಿದ್ಯೆ ಪಡೆಯುವುದು ಎಂಬ ಭಾವನೆ ಬೇಡ ನಿಮ್ಮಲ್ಲಿ ಪ್ರತಿಭೆ ಇದ್ದರೆ ಖಂಡಿತವಾಗಿಯೂ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.





ಸರಕಾರದ ಸೌಲಭ್ಯವನ್ನು ಪಡೆದುಕೊಳ್ಳಿ
ಸರಕಾರದಿಂದ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕು.‌ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ದೊರೆಯುತ್ತದೆ. ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಕಾರ್ಡು ಪಡೆದುಕೊಳ್ಳಿ ಎಂದು‌ಮನವಿ ಮಾಡಿದರು.

ವೇದಿಕೆಯಲ್ಲಿ ಮುಂಡೂರು ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರ,ಬಿಇಒ ಲೋಕೇಶ್ ಎಸ್ ಆರ್, ಎಸ್ ಡಿಎಂಸಿ ಅಧ್ಯಕ್ಷೆ ಸೀತಾ, ಗ್ರಾಪಂ ಸದಸ್ಯರಾದ ಕಮಲೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎಸ್ ಡಿ, ಮುಖ್ಯ ಶಿಕ್ಷಕಿ ಗೀತಾಕುಮಾರಿ ,ಸಭೆಯಲ್ಲಿ ಶಿವನಾಥ ರೈ ಮೇಗಿನ ಗುತ್ತು, ಮುಂಡೂರು ಗ್ರಾಪಂ ಮಾಜಿ ಅಧ್ಯಕ್ಷರಾದ ವಸಂತ ಎಸ್ ಡಿಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ‌ಅನಂತ ರವರು ಸ್ವಾಗತಿಸಿದರು.ಸುನಿತಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಣಕಿ ಗೀತಾಕುಮಾರಿ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement