ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ವಾಹನ ಮಾಲೀಕರಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಇಲ್ಲಿದೆ ಸುಲಭ ವಿಧಾನ

Published

on

ಹಳೆಯ ವಾಹನಗಳಿಗೆ HSRP ಅವಳವಡಿಕೆಯ ಕಾರ್ಯವಿಧಾನ ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

*ವಾಹನ ತಯಾರಕರನ್ನು ಆಯ್ಕೆ ಮಾಡಿ
*ವಾಹನದ ಮೂಲ ವಿವರ ಭರ್ತಿ ಮಾಡಿ
*ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)
*HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.
ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
*ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ
*ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.






ಗಮನಸಿಬೇಕಾದ ಪ್ರಮುಖ ಅಂಶಗಳು;
ರಸ್ತೆ ಬದಿಯ ಮಾರಾಟಗಾರರದಿಂದ ನಕಲಿ ಹಾಲೋಗ್ರಾಮ/ IND ಮಾರ್ಕ್‌/ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP / ಒಂದೇ ರೀತಿಯ ಪ್ಲೇಟ್‌ಗಳು/ ಸ್ಮಾರ್ಟ್‌ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಇವುಗಳು ಹೆಚ್‌ಎಸ್‌ಆರ್‌ಪಿ ಫಲಕಗಳಾಗಿರುವುದಿಲ್ಲ.

ಮಾಲಿಕತ್ವ ವರ್ಗಾವಣೆ, ಕಂತು ಕರಾರು ನಮೂದು/ರದ್ಧತಿ, ವರ್ಗಾವಣೆ ಇತ್ಯಾದಿ ಯಾವುದೇ ಸೇವೆಗಳು ಹೆಚ್‌ಎಸ್‌ಆರ್‌ಪಿ ಅಳವಡಿಸದ ಹೊರತು ಅನುಮತಿ ನೀಡಲಾಗುವುದಿಲ್ಲ.ನಿಗದಿತ ದಿನಾಂಕದಿಂದ ಮೂವತ್ತು ದಿನಗಳವರೆಗೆ ಮಾನ್ಯವಾದ ಹೆಚ್‌ಎಸ್‌ಆರ್‌ಪಿ ರಸೀದಿಯನ್ನು ಹಾಜರುಪಡಿಸುವ ವಾಹನಗಳಿಗೆ ಯಾವುದೇ ದಂಡ ಇರುವುದಿಲ್ಲ ಸರಕಾರ 17-02-2024 ರವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಅವಕಾಶ ನೀಡಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement