Published
11 months agoon
By
Akkare Newsಕಾಸರಗೋಡು: ನಗರದಲ್ಲಿ ಮಾಂಬಾಡ್ ನಿವಾಸಿಯನ್ನು ಹನಿಟ್ರ್ಯಾಪ್ನಲ್ಲಿ ಸಿಲುಕಿಸಿ 5 ಲಕ್ಷ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರು ಸಹಿತ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಕೋಜಿಕ್ಕೋಡ್ ನ ಪಿ.ಫೈಝಲ್ (37), ಈತನ ಪತ್ನಿ ಎಂ. ಪಿ ಲುಬ್ಬಾ (29), ಕಾಸರಗೋಡು ಶಿರಿಬಾಗಿಲಿನ ಎನ್.ಸಿದ್ದೀಕ್(48), ಮಾಂಗಾಡ್ ನ ದಿಲ್ಯಾದ್ (40), ಮುಟ್ಟತ್ತೋಡಿ ಯ ನಫೀಸತ್ ಮಿಪ್ರಿಯಾ ( 40), ಮಾಂಗಾಡ್ ನ ಅಬ್ದುಲ್ ಕುಂಜ್(32) ಮತ್ತು ಪಡನ್ನ ಕ್ಯಾ ಡಿನ ರಫೀಕ್ (42) ಬಂಧಿತರು ಎಂದು ಗುರುತಿಸಲಾಗಿದೆ.
ಮೇಲ್ಪರಂಬ ಠಾಣಾ ಪೊಲೀಸರು ಬಂ ಹುಧಿಸಿದ್ದಾರೆ. ಮಾಂಗಾಡ್ ತಾಮರಕ್ಕುಳಿಯ 49 ರ ಹರೆಯದ ವ್ಯಕ್ತಿಯನ್ನು ಅಪಹರಿಸಿ ಹಣ ದೋಚಲಾಗಿದೆ.ಮಾಂಗಾಡ್ ವ್ಯಕ್ತಿಯನ್ನು ಪರಿಚಯವಾದ ಲುಬ್ಬಾ ಇತರರ ಸಹಾಯದಿಂದ ಮಂಗಳೂರಿಗೆ ಕರೆದೊಯ್ದಿದ್ದು, ವಸತಿ ಗೃಹ ವೊಂದರಲ್ಲಿ ಬೆದರಿಸಿ ಹಣ ಪಡೆದಿರುವುದಾಗಿ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು.
ಇದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.ಜನವರಿ 29 ರಂದು ಘಟನೆ ನಡೆದಿತ್ತು. ವಸತಿ ಗೃಹ ದಲ್ಲಿ ವಿವಸ್ತ್ರ ದಲ್ಲಿ ನಿಲ್ಲಿಸಿ ಫೋಟೋ ತೆಗೆದು ಬೆದರಿಸಿದ್ದು, ಬ್ಲ್ಯಾಕ್ ಮೇಲ್ ನಡೆಸಿ ಹಣ ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.