Published
11 months agoon
By
Akkare Newsಉಡುಪಿ : ಕಾಡುಬೆಟ್ಟುನಿವಾಸಿ, ಸಾಂಪ್ರದಾಯಿಕ ಹುಲಿವೇಷಧಾರಿ, ಹುಲಿಕುಣಿತದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಕಾಡುಬೆಟ್ಟು ಆಶೋಕ್ ರಾಜ್ ಅವರು ನಿಧನರಾದರು.ಹಲವು ದಿನಗಳಿಂದ ಅನಾರೋಗ್ಯದಿಂದಿದ್ದ ಅಶೋಕ್ ರಾಜ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ 36 ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದ ಅವರು 28 ವರ್ಷಗಳಿಂದ ಹುಲಿವೇಷ ತಂಡ ರಚಿಸಿದ್ದರು. ಉಭಯ ಜಿಲ್ಲೆಗಳಲ್ಲಿ ತಂಡವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.ಮೃತರು ಪತ್ನಿ ಇಂಡಿಯನ್ ಖ್ಯಾತಿಯ ಸುಷ್ಮರಾಜ್ ಸಹಿತ ಇಬ್ಬರು ಪುತ್ರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.