ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಇಂದು (ಫೆ.3 )ಮತ್ತು ನಾಳೆ (ಫೆ.4) ಪುತ್ತೂರಿನ ಮೊಟ್ಟೆತಡ್ಕ ಗೋವಿಹಾರಧಾಮದಲ್ಲಿ ಗೋಲೋಕೋತ್ಸವ

Published

on

ಪುತ್ತೂರು: ಜಿಲ್ಲೆಯಲ್ಲಿರುವ ಗೋಮಾಳಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಪುತ್ತೂರು ದೇವಸ್ಥಾನಕ್ಕೆ 1910ಎಕ್ರೆ ಜಾಗವನ್ನು ಹಸ್ತಾಂತರ ಮಾಡಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಮುಂದಿನ ಅಭಿವೃದ್ಧಿಕಾರ್ಯಗಳು ನಡೆಯಲಿದೆ. ಜನರಿಗೆ ಗೋವಿನ ಬಗ್ಗೆ ಜಾಗೃತಿ ಮೂಡಿಸವ ಜತೆಗೆ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಗೋವಿಹಾರಧಾಮದಲ್ಲಿ ಫೆ.3ಮತ್ತು 4ರಂದು ಗೋಲೋಕೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.ಎತ್ತಿನ ಗಾಣದಿಂದ ಕಬ್ಬಿನ ಹಾಲು, ಎಣ್ಣೆಯನ್ನು ತೆಗೆಯುವ ಪ್ರಾತಕ್ಷಿಕ ಮತ್ತು ಮಾರಾಟ, ಖಾದ್ಯಮೇಳ, ಆಹಾರ ಮೇಳ, ಗೋಮಯ, ಗೋಮೂತ್ರದಿಂದ ತಯಾರಿಸಲ್ಪಟ್ಟ ಮೂರ್ತಿಗಳು, ಕ್ರಿಮಿನಾಶಗಳು, ಔಷಧಿ ಮಳಿಗೆ ಸೇರಿ ಗೋವಿನ ಉತ್ಪನ್ನಗಳನ್ನೊಳಗೊಂಡ 50 ಕ್ಕೂ ಅಧಿಕ ಮಳಿಗೆಗಳು ಇರಲಿದೆ.

ಇದರ ಜತೆಗೆ ಪುತ್ತೂರಿನ ಮಟ್ಟಿಗೆ ವಿಶೇಷವಾಗಿರುವ ಕುದುರೆ ಸವಾರಿ ವ್ಯವಸ್ಥೆಯನ್ನು ಮಾಡಲಾಗಿದೆ. ಹೈನುಗಾರರಿಂದ ರಾಸುಗಳ ಮತ್ತು ಗೋಪ್ರೇಮಿಗಳಿಂದ ದೇಸಿ ತಳಿಯ ಗೋವುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ವೈಯಕ್ತಿಕ ಗೋಪೂಜೆ, ಗೋಗ್ರಾಸ ನೀಡಲು ಅವಕಾಶವಿದೆ. ಗೋಲೋಕೋತ್ಸವದ ಪೋಷಕರಾಗಲು, ಮಹಾಪೋಷಕರಾಗಲು ಅವಕಾಶಗಳಿದೆ ಎಂದು ಅವರು ತಿಳಿಸಿದರು.
ಫೆ.3ರಂದು ಬೆಳಗ್ಗೆ 7.30 ಕ್ಕೆ ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್‌ ತಂತ್ರಿಗಳ ಮಾರ್ಗದರ್ಶನದಲ್ಲಿ ಗಣಪತಿ ಹೋಮ, ಗೋಸೂಕ್ತ ಹೋಮ, ಗೋಪೂಜೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಪಶುಪತಿನಾಥ ಭಜನಾ ಮಂಟಪದಲ್ಲಿ ಭಜನೆಗೆ ಚಾಲನೆ ನೀಡಲಿದ್ದಾರೆ. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿರಲಿದ್ದಾರೆ.





ಸಾಯಂಕಾಲ 4 ಕ್ಕೆ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಕೆರೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಭಾಗವಹಿಸಲಿದ್ದಾರೆ ಎಂದರು. ಫೆ.3 ರಂದು ಸಾಯಂಕಾಲ 4ರಿಂದ ಕಾಳಿಂಗ ಮರ್ದನ ಗೋಪಿಕೃಷ್ಣ ನೃತ್ಯರೂಪಕ, 5ರಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಗೋ ರಕ್ಷಿತಿ ರಕ್ಷಿತಃ ನೃತ್ಯರೂಪಕ, 6ರಿಂದ ಡಾ. ವಿದ್ಯಾಭೂಷಣ ಬೆಂಗಳೂರು ಅವರಿಂದ ಭಕ್ತಿ ಭಾವ ಲಹರಿ ನಡೆಯಲಿದೆ. ಸುಮಾರು 3ಗಂಟೆಗಳ ಕಾಲ ಕಾರ್ಯಕ್ರಮ ಇರಲಿದೆ .

ಫೆ.4ರಂದು ಬೆಳಗ್ಗೆ 8ರಿಂದ ಹೋಮ, ಗೋಪೂಜೆ ನೋಂದಾವಣಿ, 9ರಿಂದ ಗೋವು – ನಾವು ವಿಚಾರಣ ಸಂಕಿರಣ ಹಾಗೂ ಧಾರ್ಮಿಕ ಶಿಕ್ಷಣದ ಮಕ್ಕಳ ಮತ್ತು ವಿದ್ಯಾರ್ಥಿ ಸಮಾವೇಶವನ್ನು ಗೋಫಲ ಟ್ರಸ್ಟ್‌ ಅಧ್ಯಕ್ಷ ಪದ್ಮನಾಭ ಭಟ್ ಕೋಂಕೋಡಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ೩ಕ್ಕೆ ಭಕ್ತಿ ಭಾವ ಸತ್ಸಂಗ ನಡೆಯಲಿದೆ.ಫೆ.4ರಂದು ಸಾಯಂಕಾಲ 4ಕ್ಕೆ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಾಪ್ರಿಯ ತೀರ್ಥ ಶ್ರೀಪಾದಂಗಳವರು, ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. 5.30ಕ್ಕೆ ಧರ್ಮ ಸಭೆಯಲ್ಲಿ ಕುಂಟಾರು ಶ್ರೀ ರವೀಶ್ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. 6.30ರಿಂದ ಧರ್ಮದೇನು ನೃತ್ಯರೂಪಕ ನಡೆಯಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement