ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋ ವಿಹಾರಧಾಮದಲ್ಲಿ ಅದ್ದೂರಿ ” ಗೋಲೋಕೋತ್ಸವ “. ಮನಸೊರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

Published

on

ಪುತ್ತೂರು: ಸ್ವಾರ್ಥ ಹಾಗೂ ಲಾಭದ ದೃಷ್ಟಿಯಿಂದ ದೇಸೀ ಗೋವುಗಳ ಸಂಖ್ಯೆ ಕಡಿಮೆಯಾಗಿದೆ. ನಡೆದಾಡುವ ಔಷದಾಲಯವಾದ ಗೋವುಗಳ ಸಂರಕ್ಷಣೆ ಸಂಸ್ಕೃತಿಯ ಭಾಗವಾಗಬೇಕು. ಗೋ ಸಂರಕ್ಷಣೆಯ ಮನಸ್ಸು – ಸಂಕಲ್ಪ ಮಾಡುವ ಕಾರ್ಯವಾಗಬೇಕು. ಗೋವು ನಾವು ಎಂಬ ಬಗ್ಗೆ ಆತ್ಮಾವಲೋಕನ ಮಾಡುವ ಜತೆಗೆ ದನಗಳ ಬಗ್ಗೆ ಧನಾತ್ಮಕತೆಯಿಂದ ಯೋಚಿಸಬೇಕು. ಗೋದೊಳಿ ಲಗ್ನದಲ್ಲಿ ಮಾಡುವ ಕಾರ್ಯಕ್ಕೆ ಶ್ರೇಯಸ್ಸು, ಯಶಸ್ಸು ನಿಶ್ಚಿತ ಎಂದು ಎಂದು ಒಡಿಯೂರು ಶ್ರೀ ಗುರುದೇವದತ್ತ ನಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶನಿವಾರ ಪುತ್ತೂರು ಮೊಟ್ಟೆತ್ತಡ್ಕದ ಗೋವಿಹಾರ ಧಾಮದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ವತಿಯಿಂದ ನಡೆದ ಗೋಲೋಕೋತ್ಸವ ಕಾರ್ಯಕ್ರಮದಲ್ಲಿ ಕೆರೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.



ನಮ್ಮ ಸುತ್ತ ಮುತ್ತ ಔಷಧಿಯ ಗುಣವಿರುವ ಮರಗಳ ಸಂಖ್ಯೆಯ ಕಡಿಮೆಯಾಗುತ್ತಿದೆ. ಸರ್ಕಾರ ದೊಡ್ಡ ಮನಸ್ಸು ಮಾಡಿದ ಕಾರಣ ಗೋವುಗಳಿಗೆ ಉತ್ತಮ ಜಾಗ ಲಭ್ಯವಾಗಿದೆ. ಗುಡ್ಡೆ ಪ್ರದೇಶವಾಗಿರುವುದರಿಂದ ನೀರಿನ ಹರಿವು ಉತ್ತಮವಿರಬಹುದು. ಜಲಮೂಲದ ಅಭಿವೃದ್ಧಿಯ ಬಳಿಕ ಗೋವು ವಿಹಾರಧಾಮದ ನಿರ್ಮಾಣಕ್ಕೆ ಮುಂದಾದಾಗ ಅವುಗಳಿಗೂ ಸಹಕಾರಿಯಾಗುತ್ತದೆ. ಗೋವಿನ ಲೋಕದಲ್ಲಿ ನಡೆಯುತ್ತಿರುವ ಉತ್ಸವ ಹಬ್ಬದ ವಾತಾವರಣವನ್ನು ಪಡೆದುಕೊಂಡಿದೆ. ದೇಸೀ ಗೋವುಗಳಿಂದ ಪರಿಪೂರ್ಣವಾದ ಆರೋಗ್ಯವನ್ನು ಪಡೆಯಲು ಸಾಧ್ಯ ಎಂದರು.

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಗೋಸೇವಾ ಬಳಗ ಸಂಚಾಲಕ ಗೋಪಾಲಕೃಷ್ಣ ಭಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಐತ್ತಪ್ಪ ನಾಯ್ಕ, ರಾಮದಾಸ ಗೌಡ, ರವೀಂದ್ರ ರೈ, ಡಾ.ಸುಧಾ ಎಸ್ ರಾವ್. ಬಿ.ಕೆ.ವೀಣಾ, ಗೋಸೇವಾ ಬಳಗದ ಸದಸ್ಯ ವಿಜಯ ವಿ. ಎಸ್., ರಮೇಶ್, ದೇವಸ್ಥಾನ ಕಾರ್ಯನಿರ್ವಹಣಾಕಾರಿ ಕೆ.ವಿ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿ ಕೆ. ಕಾರ್ಯಕ್ರಮ ನಿರೂಪಿಸಿದರು.

ಭಜನೆಗೆ ಚಾಲನೆ:
ಪಶುಪತಿನಾಥ ಭಜನಾ ಮಂಟಪದಲ್ಲಿ ಭಜನೆಗೆ ಚಾಲನೆ ನೀಡಿದ ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂನ ಸ್ವಾಮೀಜಿ ಆಶೀರ್ವಚನ ನೀಡಿ ಭಜನೆ ದೇವರು ಮತ್ತು ಜನರ ಸಂಪರ್ಕ ಕೊಂಡಿಯಾಗಿದ್ದು, ಭಕ್ತಿಯ ಅರ್ಪಣೆಯಿಂದ ಭವಂತನನ್ನು ಒಲಿಸಿಕೊಳ್ಳಬಹುದು. ಗೋವುಗಳ ರಕ್ಷಣೆಯ ಇಂದಿನ ದಿನದಲ್ಲಿ ಅನಿವಾರ್ಯವಾಗಿದ್ದು, ದೇವಸ್ಥಾನವೊಂದು ಇದಕ್ಕೆ ಮುಂದಾಗಿರುವುದು ಮಾದರಿಯ ವಿಚಾರವಾಗಿದೆ. ಜನರು ಗೃತಿಯಾದಾಗ ಸಂಸ್ಕೃತಿಯ ಉಳಿವು ಸಾಧ್ಯ ಎಂದು ತಿಳಿಸಿದರು.





ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ:
ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ಗಣಪತಿ ಹೋಮ, ಗೋಸೂಕ್ತ ಹೋಮ, ಗೋಪೂಜೆ, ಪಶುಪತಿನಾಥ ಭಜನಾ ಮಂಟಪದಲ್ಲಿ ಭಜನೆ, ಸಾಯಂಕಾಲ ಕಾಳಿಂಗ ಮರ್ದನ ಗೋಪಿಕೃಷ್ಣ ನೃತ್ಯರೂಪಕ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಗೋ ರಕ್ಷಿತಿ ರಕ್ಷಿತಃ ನೃತ್ಯರೂಪಕ, ಡಾ. ವಿದ್ಯಾಭೂಷಣ ಬೆಂಗಳೂರು ಅವರಿಂದ ಭಕ್ತಿ ಭಾವ ಲಹರಿ ನಡೆಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement