ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಮಾರ್ಚ್‌ನಲ್ಲಿ ಸರಕಾರದಿಂದ ೩೦೦೦ ಪವರ್‌ಮ್ಯಾನ್‌ಗಳ ನೇಮಕಾತಿ ತರಬೇತಿಗೆ ಸಜ್ಜುಗೊಳಿಸಿ ಶಾಸಕ ಅಶೋಕ್‌ರೈಯವರಲ್ಲಿ ಸೂಚಿಸಿದ ಸಚಿವ ಕೆ ಜೆ ಜಾರ್ಜ್

Published

on

ಪುತ್ತೂರು: ಮಾರ್ಚ್ ತಿಂಗಳಲ್ಲಿ ೩೦೦೦ ಮೆಸ್ಕಾಂ ಪವರ್‌ಮ್ಯಾನ್‌ಗಳ ನೇಮಕಾತಿ ನಡೆಯಲಿದ್ದು ಇದಕ್ಕಾಗಿ ಅಭ್ಯರ್ಥಿಗಳಿಗೆ ತರಬೇತಿ ಸಜ್ಜುಗೊಳಿಸುವ ವ್ಯವಸ್ಥೆ ಮಾಡುವಂತೆ ಇಂಧನ ಸಚಿವ ಕೆ ಜೆ ಜಾರ್ಜ್ ರವರು ಪುತ್ತೂರು ಶಾಸಕರಾದ ಅಶೋಕ್ ರಐಯವರಲ್ಲಿ ವಿನಂತಿಸಿದ್ದಾರೆ.

ಮಂಗಳೂರು ಮೆಸ್ಕಾಂ ಭವನದಲ್ಲಿ ಫೆ. ೫ ರಂದು ನಡೆದ ಸಭೆಯಲ್ಲಿ ಸಚಿವರು ಈ ಸೂಚನೆಯನ್ನು ನೀಡಿದ್ದಾರೆ.
ಪವರ್‌ಮ್ಯಾನ್‌ಗಳ ಕೊರತೆಯ ಬಗ್ಗೆ ಸಚಿವರ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರು ದ ಕ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪುತ್ತೂರಿನಲ್ಲಿಯೂ ಪವರ್‌ಮ್ಯಾನ್‌ಗಳ ಕೊರತೆ ಇದೆ. ಪವರ್ ಮ್ಯಾನ್ ಕೆಲಸ ಪಡೆದುಕೊಂಡ ಘಟ್ಟದವರು ಇಲ್ಲಿ ಬಂದು ಎರಡರಿಂದ ಮೂರು ವರ್ಷ ಕೆಲಸ ಮಾಡಿ ಬಳಿಕ ಅವರ ಊರಿನ ಶಾಸಕರಿಂದ ಪತ್ರವನ್ನು ಪಡೆದು ಅವರ ಊರಿಗೆ ಮರಳುತ್ತಾರೆ. ಹೆಚ್ಚಿನವರು ಇದೇ ರೀತಿ ಮಾಡುವುದರಿಂದ ಈ ಭಾಗದಲ್ಲಿ ಪವರ್ ಮ್ಯಾನ್ ಕೊರತೆ ಉಂಟಾಗುತ್ತಿದೆ.

ದ ಕ ಜಿಲ್ಲೆಯವರು ಪವರ್‌ಮ್ಯಾನ್ ಕೆಲಸಕ್ಕೆ ಅರ್ಜಿ ಹಾಕುವುದೇ ಕಡಿಮೆಯಾಗಿದೆ. ಈ ಕಾರಣಕ್ಕೆ ಅವರಿಗೆ ತರಬೇತಿ ನೀಡಿ ಅವರನ್ನು ಪವರ್ ಮ್ಯಾನ್ ಹುದ್ದಗೆ ನೇಮಕಾತಿ ಮಾಡಿಕೊಳ್ಳಬೇಕಿದೆ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ನಾನು ನನ್ನ ಟ್ರಸ್ಟ್ ಮೂಲಕ ತರಬೇತಿ ನೀಡುತ್ತೇನೆ ಇಲಾಖೆಯಿಂದ ತರಬೇತಿಗೆ ಬೇಕಾದ ವ್ಯವಸ್ಥೆಗಳನ್ನು ಜೋಡನೆ ಮಾಡಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವರು ಒಟ್ಟು ೬ ಸಾವಿರ ಪವರ್‌ಮ್ಯಾನ್‌ಗಳ ಬೇಡಿಕೆ ಇದೆ ಆದರೆ ಒಮ್ಮೆಲೆ ೬ ಸಾವಿರ ಮಂದಿಯನ್ನು ನೇಮಕಾತಿ ಮಾಡಲು ಕಾನೂನಿನ ತೊಡಕು ಇದೆ ಆರಂಭದಲ್ಲಿ ಮೂರು ಸಾವಿರ ಮಂದಿಯನ್ನು ನೇಮಕಾತಿ ಮಡುತ್ತೇವೆ, ನಿಮ್ಮ ಮೂಲಕವೇ ಕರಾವಳಿ ಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಆ ಮೂಲಕ ನಿಮ್ಮ ಊರಿನವರನ್ನೇ ಇಲ್ಲಿಗೆ ಪವರ್ ಮ್ಯಾನ್‌ಗಳಾಗಿ ನೇಮಕ ಮಾಡೋಣ ಎಂದು ಸೂಚಿಸಿದರು.

ಶಾಸಕರಿಗೆ ಶಹಬ್ಬಾಸ್ ಎಂದ ಸಚಿವರು
ಇದೇ ಮೊದಲ ಬಾರಿಗೆ ಪವರ್‌ಮ್ಯಾನ್‌ಗಳಿಗೆ ಕಂಬ ಹತ್ತುವ ಮತ್ತು ಇತರೆ ಕೆಲಸಗಳಿಗೆ ತಮ್ಮ ಟ್ರಸ್ಟ್ ಮೂಲಕ ಉಚಿತ ತರಬೇತಿ ನೀಡಿ ಅವರಿಗೆ ಉದ್ಯೋಗ ನೀಡಲು ಮುಂದಾಗಿದ್ದೀರಿ ನಿಮ್ಮ ಈ ಉತ್ಸಾಹಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಕೆ ಜೆ ಜಾರ್ಜ್ ಹೇಳಿದರು. ನೀವು ಈಗಾಗಲೇ ಕೆಎಸ್‌ಆರ್‌ಟಿಸಿಯಲ್ಲಿ ಅನೇಕ ಮಂದಿಗೆ ತಾತ್ಕಾಲಿಕ ಚಾಲಕ ಕೆಲಸ ಕೊಡಿಸಿದ್ದೀರಿ ಎಂಬುದನ್ನು ತಿಳಿದುಕೊಂಡೆ ನಿಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ನಿಮ್ಮ ಮುತುವರ್ಜಿಗೆ ಶಹಬ್ಬಾಸ್ ಎಂದು ಸಚಿವರು ಹೇಳಿದರು.

ಉಪ್ಪಿನಂಗಡಿಯ ಕರ್ವೆಲ್ ಮತ್ತು ಕೊಯಿಲದಲ್ಲಿ ಸಬ್‌ಸ್ಟೇಷನ್ ಗೆ ಸೂಚನೆ
ಉಪ್ಪಿನಂಗಡಿಯ ಕರ್ವೆಲ್ ಮತ್ತು ಕೊಯಿಲದಲ್ಲಿ ಸಬ್‌ಸ್ಟೇಷನ್ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿಕೊಟ್ಟಿದ್ದೇನೆ, ಕಳೇದ ಎಂಟು ತಿಂಗಳಿನಿಂದ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಸಬ್‌ಸ್ಟೇಷನ್ ಶೀಘ್ರಗತಿಯಲ್ಲಿ ಮಾಡಿ ಎಂದು ಹೇಳಿದ್ದರೂ ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಅಧಿಕಾರಿಗಳು ಉತ್ತರ ನೀಡಲು ಮುಂದಾದಾಗ ಶಾಸಕರು ನೀವು ಕಥೆ ಹೇಳುವುದು ಬೇಡ ಯಾಕೆ ತಡವಾಗಿದೆ ಎಂಬುದಕ್ಕೆ ಉತ್ತರ ಕೊಡಿ. ನಿಮ್ಮ ಕಥೆ ಕೇಳಲು ನಾನು ಪ್ರಶ್ನೆ ಕೇಳಿದ್ದಲ್ಲ ಎಂದು ಶಸಕರು ಖಾರವಾಗಿಯೇ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು ವಾರದೊಳಗೆ ಸಬ್‌ಸ್ಟೇಷನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಿ, ಅಶೋಕ್ ರೈ ಏನೇ ಹೇಳಿದರೂ ತಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆಯನ್ನು ನೀಡಿದರು.





ಬಡವರ ಮನೆ ಮೇಲಿರುವ ತಂತಿ ತೆರವು ಮಾಡಿ
ಅನೇಕ ಕಡೆಗಳಲ್ಲಿ ಬಡವರ ಮನೆಯ ಮೇಲೆ ವಿದ್ಯುತ್ ತಂತಿಗಳನ್ನು ಹಾಕಿದ್ದೀರಿ ಅದನ್ನು ತೆರವು ಮಾಡಬೇಕು. ಈಗಾಗಲೇ ಹಲವು ಮಂದಿ ಇಲಾಖೆಗೆ ಅರ್ಜಿ ಹಾಕಿದರೂ ನಿಮ್ಮ ಸ್ವಯಂ ಖರ್ಚಿನಿಂದ ತೆರವು ಮಡಿ ಎಂದು ಮೆಸ್ಕಾಂ ತಿಳಿಸಿದೆ. ಲೈನ್ ತೆರವು ಮಾಡಲು ಬಡವರ ಬಳಿ ಹಣವಿಲ್ಲ. ಮೂರು ಸೆಂಟ್ಸ್ ಜಾಗದಲ್ಲಿ ಮನೆ ಮಾಡಿಕೊಂಡು ಬಡತನದಿಂದ ಕಾಲ ಕಳೆಯುವ ಕುಟುಂಬಗಳಲ್ಲಿ ಲೈನ್ ಬದಲಾಯಿಸಿಕೊಳ್ಳಲು ಆರ್ಥಿಕಶಕ್ತಿಯಿಲ್ಲ. ಇಲಾಖೆಯೇ ಸ್ವಯಂ ಖರ್ಚು ಮಡಿ ಬಡವರ ಮನೆಯ ಮೇಲಿನ ಲೈನ್ ತೆಗೆಯಬೇಕು ಎಂದು ಸಚಿವರಲ್ಲಿ ಶಾಸಕರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆ ಕೆಲವರು ತಂತಿಯ ಅಡಿಯಲ್ಲೇ ಮನೆ ಕಟ್ಟಿಕೊಂಡಿದ್ದಾರೆ, ತಂತಿ ಮೊದಲೇ ಇತ್ತು. ಮನೆ ಕಟ್ಟಿದ ಮೇಲೆ ನಾವು ತಂತಿ ಎಳೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು ನೀವು ಬಡವರ ಜಾಗದ ಮೇಲೆ ಯಾಕೆ ತಂತಿ ಎಳೆದಿದ್ದೀರಿ, ಅವರಿಗೆ ಇರುವ ಮೂರರಿಂದ ೫ ಸೆಂಟ್ಸ್ ಜಾಗದಲ್ಲಿ ತಂತಿ ಎಳೆದರೆ ಅವರು ಎಲ್ಲಿ ಮನೆ ಕಟ್ಟುವುದು? ಮನೆ ಕಟ್ಟಲು ಜಾಗವಿಲ್ಲದೆ ತಂತಿಯ ಅಡಿಯಲ್ಲೇ ಮನೆ ಕಟ್ಟಿದ್ದಾರೆ. ನಮಗೆ ಯಾವುದೇ ಕಾರಣ ಹೇಳಬೇಡಿ ತಂತಿಯನ್ನು ತೆರವು ಮಾಡಿ ಬಡವರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಇಂಥಹ ಮನೆಗಳ ಪಟ್ಟಿ ಮಾಡಿ ಅವುಗಳನ್ನು ತೆರವು ಮಾಡಿ ಎಂದು ಅಧಿಕರಿಗಳಿಗೆ ಸೂಚನೆ ನೀಡಿದರು.

ಜೋತು ಬಿದ್ದ ತಂತಿ ತೆರವು ಮಾಡಿ
ಪುತ್ತೂರು ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಹಳೆಯ ಕಾಲದ ವಿದ್ಯುತ್ ತಂತಿಗಳು ಜೋತು ಬೀಳುತ್ತಿದೆ ಅವುಗಳನ್ನು ತೆರವು ಮಾಡಿ ಹೊಸ ತಂತಿಗಳನ್ನು ಅಳವಡಿಸುವಂತೆಯೂ ಶಾಸಕರು ಸಚಿವರಲ್ಲಿ ಮನವಿ ಮಾಡಿದರು.ವೇದಿಕೆಯಲ್ಲಿ ಕೆಪಿಟಿಸಿಎಲ್ ಎಂ ಡಿ ಪಂಕಜಕುಮಾರ್ ಪಾಂಡೆ, ಮೆಸ್ಕಾಂ ಎಂ ಡಿ ಪದ್ಮಾವತಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement