ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

31ನೇ ವರ್ಷದ ಕೋಟಿ-ಚೆನ್ನಯ ಕಂಬಳ ಯಶಸ್ಸಿಗೆ ಸಹಕರಿಸಿದವರಿಗೆ ಅಭಿನಂದನೆ , ಕಂಬಳ ಸಮಿತಿ ಸದಸ್ಯರಿಗೆ ಸನ್ಮಾನ

Published

on

ಪುತ್ತೂರು : ಇತಿಹಾಸ ಪ್ರಸಿದ್ಧ 31ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳವು ಅತ್ಯಂತ ಯಶಸ್ವಿಗೊಳ್ಳಲು ಸಹಕರಿಸಿದ ಎಲ್ಲಾ ಸದಸ್ಯರಿಗೆ, ತನು ಮನ ಧನ ನೀಡಿ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಾಗೂ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಪದಾಧಿಕಾರಿಗಳಾಗಿದ್ದು ಇತ್ತೀಚೆಗೆ ವಿವಿಧ ಹುದ್ದೆಗಳನ್ನು ಪಡೆದವರನ್ನು ಸನ್ಮಾನಿಸುವ ಕಾರ್ಯಕ್ರಮವು ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ರವರ ನೇತೃತ್ವದಲ್ಲಿ ಫೆ. 10 ರಂದು ದರ್ಬೆಯಲ್ಲಿ ನಡೆಯಿತು.

ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ, ಪುತ್ತೂರಿನಲ್ಲಿ ಈ ಹಿಂದೆ ನಡೆದ ಪಿಲಿರಂಗ್, ಕಬಡ್ಡಿ ಸ್ಪರ್ಧೆ ಹಾಗೂ 31ನೇ ವರ್ಷದ ಜೋಡುಕರೆ ಕಂಬಳವು ಅತ್ಯಂತ ಯಶಸ್ವಿಗೊಂಡು ಎಲ್ಲಾ ಕಡೆ ಹೆಸರುಗಳಿಸಿದೆ ಇದಕ್ಕೆ ಕಾರಣೀ ಭೂತರಾದ ಹಾಗೂ ಹಗಲು ರಾತ್ರಿ ಎನ್ನದೆ ಶ್ರಮವಹಿಸಿದ ಎಲ್ಲಾ ಸದಸ್ಯರಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಪದಾಧಿಕಾರಿಗಳಾಗಿದ್ದು, ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ನಿರಂಜನ ರೈ ಮಠಂತಬೆಟ್ಟು,ಕೃಷ್ಣಪ್ರಸಾದ್ ಆಳ್ವ, ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸುರೇಂದ್ರ ರೈ ಬಳ್ಳ ಮಜಲು ನಿರ್ದೇಶಕರಾಗಿ ಆಯ್ಕೆಗೊಂಡ ರಂಜಿತ್ ಬಂಗೇರ, ಪುತ್ತೂರು ನಗರಸಭಾ ಸದಸ್ಯರಾಗಿ ಆಯ್ಕೆಗೊಂಡ ದಿನೇಶ್ ಶೇವಿರೆ ಪುತ್ತೂರು ಕೋಟಿ ಚೆನ್ನಯ ಕಂಬಳವು ಅತ್ಯಂತ ಯಶಸ್ವಿಯಾಗಿ ನೆರವೇರಲು ಅದರ ನೇತೃತ್ವವನ್ನು ವಹಿಸಿಕೊಂಡ ಚಂದ್ರಹಾಸ ಶೆಟ್ಟಿ ಹಾಗೂ ಅವರ ಟೀಮ್‌ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಪುತ್ತೂರಿನ ಮಾಜಿ ಶಾಸಕರಾದ ಶಕುಂತಳಾ ಟಿ ಶೆಟ್ಟಿ ಅವರು ಶಾಲು ಹೊದಿಸಿ ಸನ್ಮಾನಿಸಿದರು.





ಬಳಿಕ ಮಾತನಾಡಿದ ಅವರು ಪುತ್ತೂರು ಕಂಬಳವನ್ನು ನಡೆಸಿಕೊಂಡು ಬಂದ ವಿನಯ್ ಕುಮಾರ್ ಸೊರಕೆ ಅವರು ಉಡುಪಿಯಲ್ಲಿ ಎಂ.ಪಿ. ಆದರೂ ನಾನು ಕಾಂಗ್ರೆಸ್ಸಿಗೆ ಬಂದು ಎಂಎಲ್‌ಎ ಆದೆ. ಅಶೋಕ್ ರೈ ರವರು ಪುತ್ತೂರು ಕಂಬಳಕ್ಕೆ ಸೇರಿಕೊಂಡ ಬಳಿಕ ಶಾಸಕರಾದರು ಅದೇ ರೀತಿ ಕಂಬಳದಲ್ಲಿ ತೊಡಗಿಸಿಕೊಂಡರವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸ್ಥಾನಮಾನ ದೊರಕುತ್ತಲೇ ಬರಲಿದೆ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮದ ಸಂದರ್ಭದಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ.ಖಜಾಂಜಿ ಪಂಜಿಗುಡ್ಡೆ ಈಶ್ವರಭಟ್ ಉಪಾಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ ಉಪಸಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement