Published
10 months agoon
By
Akkare Newsಪುತ್ತೂರು : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.17ರಿಂದ ಫೆ.24ರವರೆಗೆ ಬ್ರಹ್ಮಕಲಶ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮಂಗಳವಾರ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ ನಡೆಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರರ ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಬೆಯಿಂದ ಬೊಳುವಾರು ತನಕ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಸುಮಾರು ಆರು ತಂಡಗಳಾಗಿ ವಿಂಗಡಿಸಿ ಆಮಂತ್ರಣ ಪತ್ರಿಕೆ ಹಂಚಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಸದಸ್ಯ ಪ್ರವೀಣ್ ಕುಮಾರ್ ರೈ ನಳೀಲು, ಕಾರ್ಯಾಲಯ ಸಂಚಾಲಕ ಸುರೇಶ್ ರೈ ವಿಟ್ಲ ಕೊಲ್ಯ, ಆಮಂತ್ರಣ ವಿತರಣಾ ಸಮಿತಿ ಸಂಚಾಲಕ ಸುಂದರ ಪೂಜಾರಿ ಮಣಿಕ್ಕರ, ಸಹ ಸಂಚಾಲಕ ಜಗನ್ನಾಥ ರೈ ಮಣಿಕ್ಕಾರ, ಸ್ವಾಗತ ಸಮಿತಿ ಸಹ ಸಂಚಾಲಕ ರವಿಪ್ರಸಾದ್ ಆಳ್ವ ಪಾಲ್ತಾಡು, ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಸುಧಾಕರ ರೈ, ಕೆಯ್ಯೂರು ಗ್ರಾ.ಪಂ.ಸದಸ್ಯೆ ಮೀನಾಕ್ಷಿ ವಿ ರೈ, ವಿವಿಧ ಸಮಿತಿಯ ಪದಾಧಿಕಾರಿಗಳಾದ ಹರಿಶ್ಚಂದ್ರ, ಬಾಲಕೃಷ್ಣ ಗೌಡ ಬಾರ್ತಿಕುಮೇರು, ಹರೀಶ್ ಎನ್ ಅಜೇಯನಗರ,ಸುಜಿತ್, ಮನೋಜ್, ಸೀತಾರಾಮ, ಶೇಷಪ್ಪ ರೈ ಮಣಿಕ್ಕಾರ, ಮಧು ಕುಮಾರ್ ಪಾಲ್ತಾಡು, ಭಾಸ್ಕರ ಕುಂಡಡ್ಕ, ರಾಮಣ್ಣ ನಾಯ್ಕ, ಗೋಪಾಲ ಆಚಾರ್ಯ, ಉಮೇಶ್ ನಾಯ್ಕ ಬರಮೇಲು, ಸುಂದರ ಬಾಕಿಜಾಲು, ಅಶಿತ್ ಶೆಟ್ಟಿ ಉಬರಡ್ಕ, ಮನೋಜ್ ಪಿ, ಚಂದ್ರಶೇಖರ, ವಸಂತ ರೈ ಕೆಯ್ಯೂರು ಮೊದಲಾದವರು ಉಪಸ್ಥಿತರಿದ್ದರು.