Published
10 months agoon
By
Akkare Newsಉಪ್ಪಿನಂಗಡಿ ಕಂಪೆನಿಯ ಕಾಮಗಾರಿಗಾಗಿ ಕಬ್ಬಿಣದ 40 ಪ್ಲೇಟಗಳನ್ನು ಇರಿಸಿದ್ದು ಅಲ್ಲಿಂದ ಬೇರೆ ಬೇರೆ ಸ್ಥಳಕ್ಕೆ ಕಾಮಗಾರಿಗೆ ಕೊಂಡು ಹೋಗುವುದಾಗಿರುತ್ತದೆ. ಸ್ಥಳದಲ್ಲಿ ಇರಿಸಲಾಗಿದ್ದ ಪ್ಲೇಟ್ ಕಾಣೆಯಾದ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಬಳಿ ನಡೆದಿದೆ.
ಬಿ ಸಿ ರೋಡ್ ಬಂಟ್ವಾಳ ನಿವಾಸಿ ನಂದಕುಮಾರ ಆರ್ ಎಂಬವರ ಕೆ.ಎನ್.ಆರ್ ಕನಸ್ಟ್ರಕ್ಷನ್ ಲಿಮಿಟೆಡ್ ಪಿಆರ್‌ಓ ಆಗಿ ಕೆಲಸ ಮಾಡಿಕೊಂಡಿದ್ದು. ಕಂಪನಿಯ ಕಾಮಗಾರಿಗಾಗಿ ಕಬ್ಬಿಣದ 40 ಪ್ಲೇಟ್ ಗಳನ್ನು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕಾಂಚನ ಕ್ರಾಸನ ಹತ್ತಿರ ಇರಿಸಿದ್ದು, ಅಲ್ಲಿಂದ ಬೇರೆ ಬೇರೆ ಸ್ಥಳಕ್ಕೆ ಕಾಮಗಾರಿಗೆ ಕೊಂಡು ಹೋಗುವುದಾಗಿರುತ್ತದೆ. ಬೆಳಿಗ್ಗೆ ಪ್ಲೇಟ್ ಆ ಸ್ಥಳದಲ್ಲಿ ಕಾಣೆಯಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಪ್ರಕರಣ ಮುಂದುವರಿದಂತೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರು ಕಳವು ಮಾಡಿದ ಕಂಪನಿಯ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿರುವ ವಿಚಾರ ತಿಳಿದು ನಂದಕುಮಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ನೋಡಲಾಗಿ ಸ್ವಾಧೀನಪಡಿಸಿದ 40 ಕೆ ಎನ್ ಆರ್ ಕನಸ್ಟ್ರಕ್ಷನ್ ಪ್ಲೇಟ್ ಗಳನ್ನು ನೋಡಿ ಗುರುತಿಸಿದ್ದು. ಕಳ್ಳರು ಸಂಜೆಯಿಂದ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಅಂದಾಜು 100000 ರೂ ಮೌಲ್ಯದ ಕಬ್ಬಿಣದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 21/2024 ಕಲಂ: 379 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.